
ಕಿತ್ತೂರು : ಮಾಜಿ ಸಚಿವ ಡಿ.ಬಿ ಇನಾಮದಾರ್ ವಿಧಿವಶ

ಬೆಳಗಾವಿ : ಐದು ಬಾರಿ ಕಿತ್ತೂರು ಮತಕ್ಷೇತ್ರದ ಶಾಸಕರಾಗಿ ಹಾಗೂ ಮಾಜಿ ಸಚಿವರಾಗಿದ್ದ ಸಜ್ಜನ ರಾಜಕಾರಣಿ ಡಿ.ಬಿ ಇನಾಮದಾರ್ ವಿಧಿವಶರಾಗಿದ್ದಾರೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿಬಿ ಇನಾಮದಾರ್ ಅವರು ನ್ಯುಮೋನಿಯಾ, ಲಂಗ್ಸ್ ಇಫೆಕ್ಷನ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನ ರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಮತಕ್ಷೇತ್ರದಿಂದ ಡಿ.ಬಿಇನಾಂದಾರ ಅವರು ಕಾಂಗ್ರೆಸ್ ನಿಂದ 9 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ 5 ಸಲ ಶಾಸಕರಾಗಿ ಆಯ್ಕೆಯಾಗಿದ್ದರು. ಎಸ್. ಎಂ. ಕೃಷ್ಣ ಸರ್ಕಾರದ ಹಲವು ಮಹತ್ವ ಖಾತೆ ನಿಭಾವಿಸಿದ್ದರು. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನೆರವೇರಲಿದೆ.