ರಾಹುಲ್ ಗಾಂಧಿ ಅಮೇರಿಕಾದಲ್ಲಿ ಯಾಕೆ ಸಿಲುಕಿದ್ರು…? ಶಾಕಿಂಗ್ ಹೇಳಿಕೆ ಕೊಟ್ಟ ಸಿಟಿ ರವಿ
ಬೆಳಗಾವಿ : ಕಾಂಗ್ರೆಸ್ ಪಕ್ಷ ಮಾಡುವ ಸುಳ್ಳು ಆರೋಪಗಳನ್ನು ನಾವು ನಂಬಬೇಕಾ? ರಾಹುಲ್ ಗಾಂಧಿ ಮೇಲೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆರೋಪಗಳಿವೆ. ಯಾವುದೋ ವಿಷಯದಲ್ಲಿ ಅಮೇರಿಕಾದಲ್ಲಿ ಸಿಲುಕಿದ್ದರಂತೆ.
ರಜೆಯ ಸಂದರ್ಭದಲ್ಲಿ ಯಾರದ್ದೋ ಜೊತೆ ಸುತ್ತಾಡುತ್ತಿದ್ದರಂತೆ ಎಂಬ ಮಾತಿದೆ ಅವೆಲ್ಲವನ್ನೂ ನಾವು ನಂಬಬೇಕಾ ಎಂದು ಮಾಜಿ ಸಚಿವ ಸಿಟಿ ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಗುರುವಾರ ನಗರದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಕಾಂಗ್ರೆಸ್ ಅನೇಕ ವಿಚಾರದಲ್ಲಿ ಸುಳ್ಳು ಆರೋಪ ಮಾಡುವುದು ಸಾಮಾನ್ಯ. ಪ್ರಜ್ವಲ್ ರೇವಣ್ಣ ಪ್ರಕರಣದ ವಿಷಯದಲ್ಲಿ ಬಿಜೆಪಿ ನಿಲುವು ತುಂಬಾ ಸ್ಒಷ್ಟವಾಗಿದೆ. ಪ್ರಕರಣದ ಕುರಿತು ಹಾಲಿ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಿ ಸತ್ಯಾಸತ್ಯತೆ ಹೊರಗೆ ಬರಲಿ ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣ ನಮಗೂ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆದಮೇಲೆ ಗೊತ್ತಾಗಿದ್ದು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ. ಇವರ ತನಿಖೆಗೆ ಅಡ್ಡ ಬಂದವರು ಯಾರು ಎಂಬುದನ್ನಾದರು ಹೇಳಿ. ಪ್ರಕರಣದ ತನಿಖೆ ಮಾಡುವುದು ಬಿಟ್ಟು ಬಿಜೆಪಿ ಕಡೆ ಬೊಟ್ಟು ಮಾಡುವುದನ್ನು ಪಕ್ಷ ಖಂಡಿಸುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರವಾಗಿ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿಕೆ ಖಂಡಿಸಿದ ಇವರು. ಕಾಂಗ್ರೆಸ್ ಮನಸ್ಥಿತಿ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ ಎಂಬುದು ಕಾಗೆ ಹೇಳಿಕೆಯಿಂದ ತಿಳಿಯುತ್ತದೆ. ಅಷ್ಟೇ ಅಲ್ಲದೆ ಮತ ನೀಡದಿದ್ದರೆ ಕರೆಂಟ್ ಕಟ್ ಮಾಡುವ ಅವಾಜ್ ಹಾಕುತ್ತಿದ್ದಾರೆ.
ಖುದ್ದು ಡಿಸಿಎಂ ಡಿ.ಕೆ ಶಿವಕುಮಾರ ಅವರೇ ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ಮತದಾರರಿಗೆ ದಮ್ಕಿ ಹಾಕಿದ್ದು ಕಂಡುಬಂದಿದ್ದು ಇದನ್ನು ಜನ ಗಂಭೀರವಾಗಿ ತಗೆದುಕೊಂಡಿದ್ದಾರೆ ಎಂದರು.


