Select Page

Advertisement

ಬಾಕ್ಸೈಟ್ ರಸ್ತೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ ; ತಪ್ಪಿದ ಅನಾಹುತ

ಬಾಕ್ಸೈಟ್ ರಸ್ತೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ ; ತಪ್ಪಿದ ಅನಾಹುತ

ಬೆಳಗಾವಿ : ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಪಲ್ಟಿ ಆಗಿದ್ದು ದೊಡ್ಡ ಅನಾಹುತ ತಪ್ಪಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ನಗರದ ಬಾಕ್ಸೈಟ್ ರಸ್ತೆಯಲ್ಲಿ‌ ಸಂಜೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಹನುಮಾನ್ ಸರ್ಕಲ್ ಇಳಿಜಾರಿನಿಂದ‌ ನೇರವಾಗಿ ಬಂದು ಪಲ್ಟಿ ಆಗಿದೆ. ಅದೃಷ್ಟವಶಾತ್ ಮುಂದೆ ಯಾವುದೇ ವಾಹನ‌ ಇಲ್ಲದ ಕಾರಣ ಅನಾಹುತ ತಪ್ಪಿದೆ.

ಘಟನೆಯಲ್ಲಿ ಚಾಲಕನ ನಿರ್ಲಕ್ಷ್ಯ ಕಂಡುಬಂದಿದ್ದು ಹನುಮಾನ್ ‌ನಗರ ಸರ್ಕಲ್ ನಿಂದ ಭಾರೀ ಗಾತ್ರದ ವಾಹನ ಸಂಚಾರಕ್ಕೆ ಅವಕಾಶ ಇಲ್ಲದಿದ್ದರು ಟ್ರ್ಯಾಕ್ಟರ್ ಬಂದಿದ್ದಕ್ಕೆ ಘಟನೆ ಸಂಭವಿಸಿದೆ.

ಈ ಕುರಿತು ನಗರ ಪೊಲೀಸ್ ಇಲಾಖೆ ಎಚ್ಚರ ವಹಿಸದಿದ್ದರೆ ಮುಂದೆಯೂ ಈ ರೀತಿಯ ಘಡನೆಗಳು ಸರ್ವೇ ಸಾಮಾನ್ಯ ಎನ್ನುತ್ತಾರೆ ಸ್ಥಳೀಯರು.

Advertisement

Leave a reply

Your email address will not be published. Required fields are marked *

error: Content is protected !!