ವಾಹನ ಡಿಕ್ಕಿ ; ಬೈಲಹೊಂಗಲ ವ್ಯಕ್ತಿ ಸಾವು

ಯರಗಟ್ಟಿ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ರವಿವಾರ ಮಧ್ಯಾಹ್ನ ತಾಲೂಕಿನ ಹಲಕಿ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ಬೆಳಗಾವಿ -ಬಾಗಲಕೋಟೆ ರಸ್ತೆಯಲ್ಲಿ ಸಂಭವಿಸಿದೆ.
ಮೃತರಿಗೆ ತಂದೆ, ತಾಯಿ, ಪತ್ನಿ ಇದ್ದಾರೆ. ಬೈಲಹೊಂಗಲ ತಾಲೂಕು ಮದನಬಾಂವಿ ಗ್ರಾಮದ ಮಲ್ಲಿಕಾರ್ಜುನ ಯಲ್ಲಪ್ಪ ಹೊಂಗಲ (37) ಮೃತ ದುರ್ದೆವಿ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


