Select Page

Advertisement

ಖಾತೆ ಹಂಚಿಕೆಯಲ್ಲಿ ಕೊಂಚ ಬದಲಾವಣೆ ; ಸಿದ್ದು ಸಂಪುಟದಲ್ಲಿ ಸದಸ್ಯರಿಗೆ ಯಾವೆಲ್ಲ ಖಾತೆ

ಖಾತೆ ಹಂಚಿಕೆಯಲ್ಲಿ ಕೊಂಚ ಬದಲಾವಣೆ ; ಸಿದ್ದು ಸಂಪುಟದಲ್ಲಿ ಸದಸ್ಯರಿಗೆ ಯಾವೆಲ್ಲ ಖಾತೆ

ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಶನಿವಾರ ಎರಡನೇ ಸುತ್ತಿನಲ್ಲಿ 24 ಜನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಸಧ್ಯ ಒಟ್ಟು 34 ಜನ ಶಾಸಕರು ಈ ಸರ್ಕಾರದಲ್ಲಿ ವಿವಿಧ ಹುದ್ದೆ ಅಲಂಕರಿಸಿದ್ದಾರೆ. ಖಾತೆಗಳನ್ನು ಹಂಚಿಕೆ ಮಾಡಿ ಪಟ್ಟಿ ಕೂಡಾ ಬಿಡುಗಡೆ ಮಾಡಲಾಗಿತ್ತು.

ಆದರೆ ಕಾಂಗ್ರೆಸ್ ಹೊರಡಿಸಿದ್ದ ಪಟ್ಟಿ ಅಧಿಕೃತ ಅಲ್ಲ ಎಂಬ ಮಾತು ಕೇಳಿಬಂದಿದ್ದವು. ಹಾಗೆಯೇ ರಾಮಲಿಂಗಾರೆಡ್ಡಿ ವರಿಗೆ ಕೊಟ್ಟಿದ್ದ ಸಾರಿಗೆ ಖಾತೆ ಕುರಿತು ಅಸಮಾಧಾನ ಕೂಡಾ ಹೊರ ಹಾಕಿದ್ದರು. ಈ ಎಲ್ಲಾ ಬೆಳವಣಿಗೆ ನಂತರ ಸಧ್ಯ ಹಳೆಯ ಖಾತೆ ಹಂಚಿಕೆ ಪಟ್ಟಿಯನ್ನೇ ಮುಂದುವರಿಸಲಾಗಿದೆ. ಜೊತೆಗೆ ಆರ್.ಬಿ ತಿಮ್ಮಾಪುರ ಬಳಿ ಇದ್ದ ಮುಜರಾಯಿ ಖಾತೆಯನ್ನು ರಾಮಲಿಂಗಾರೆಡ್ಡಿ ಅವರಿಗೆ ಕೊಡಲಾಗಿದೆ.

ಕಾಂಗ್ರೆಸ್ ಹಂಚಿಕೆ ಮಾಡಿರುವ ಸಚಿವರಿಗೆ ಯಾರಿಗೆ ಯಾವ ಖಾತೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಸಿದ್ದರಾಮಯ್ಯ – ಸಿಎಂ

ಡಿ.ಕೆ ಶಿವಕುಮಾರ್ – ಡಿಸಿಎಂ – ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ

ಡಾ. ಜಿ ಪರಮೇಶ್ವರ – ಗೃಹ

ಹೆಚ್.ಕೆ ಪಾಟೀಲ್ – ಕಾನೂನು & ಸಂಸದೀಯ ವ್ಯವಹಾರ

ಕೆ.ಜೆ ಜಾರ್ಜ – ಇಂದನ

‌ಎಂ.ಬಿ ಪಾಟೀಲ್ – ಬೃಹತ್ ಕೈಗಾರಿಕೆ

ರಾಮಲಿಂಗಾರೆಡ್ಡಿ – ಸಾರಿಗೆ, ಮುಜರಾಯಿ

ಸತೀಶ್ ಜಾರಕಿಹೊಳಿ – ಲೋಕೋಪಯೋಗಿ

ಪ್ರಿಯಾಂಕ ಖರ್ಗೆ – ಗ್ರಾಮೀಣಾಭಿವೃದ್ಧಿ – ಪಂಚಾಯತ್ ರಾಜ್

ಜಮೀರ್ ಅಹಮದಾಬಾದ್ ಖಾನ್ – ವಸತಿ / ವಕ್ಫ್

ಕೃಷ್ಣಭೈರೇಗೌಡ – ಕಂದಾಯ

ದಿನೇಶ್ ಗುಂಡೂರಾವ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಚಲುವರಾಯಸ್ವಾಮಿ – ಕೃಷಿ

ಕೆ.ವೆಂಕಟೇಶ – ಪಶುಸಂಗೋಪನೆ ಹಾಗೂ ರೇಷ್ಮೆ

ಹೆಚ್ ಸಿ ಮಹಾದೇವಪ್ಪ – ಸಮಾಜಕಲ್ಯಾಣ

ಈಶ್ವರ ಖಂಡ್ರೆ – ಅರಣ್ಯ ಮತ್ತು ಪರಿಸರ

ಕೆ.ಎನ್ ರಾಜಣ್ಣ – ಸಹಕಾರ

ಶರಣಬಸಪ್ಪ ದರ್ಶನಾಪೂರ – ಸಣ್ಣ ಮತ್ತು ಸಾರ್ವಜನಿಕ ಕೈಗಾರಿಕೆ

ಶಿವಾನಂದ ಪಾಟೀಲ್ – ಸಕ್ಕರೆ ಮತ್ತು ಜವಳಿ

ಆರ್‌.ಬಿ ತಿಮ್ಮಾಪುರ – ಅಬಕಾರಿ & ಜವಳಿ

ಎಸ್ ಎಸ್ ಮಲ್ಲಿಕಾರ್ಜುನ – ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ

ಶಿವರಾಜ್ ತಂಗಡಗಿ – ಹಿಂದುಳಿದ ವರ್ಗ & ಎಸ್ಟಿ ಕಲ್ಯಾಣ

ಶರಣಪ್ರಕಾಶ ಪಾಟೀಲ್ – ಉನ್ನತ ಶಿಕ್ಷಣ ಖಾತೆ

ಮಂಕಾಳ ವೈದ್ಯ – ಮೀನುಗಾರಿಗೆ, ಬಂದರು ಮತ್ತು ಒಳನಾಡು

ಲಕ್ಷ್ಮೀ ಹೆಬ್ಬಾಳ್ಕರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಡಿ ಸುಧಾಕರ – ಯೋಜನೆ ಮತ್ತು ಸಾಂಖ್ಯಿಕ

ಸಂತೋಷ ಲಾಡ್ – ಕಾರ್ಮಿಕ ಮತ್ತು ಕೌಶಾಲ್ಯಾಭಿವೃದ್ಧಿ

ಎನ್ ಎಸ್ ಬೋಸರಾಜು – ಪ್ರವಾಸೋದ್ಯಮ ಮತ್ತು ವಿಜ್ಞಾನ

ಬೈರತಿ ಸುರೇಶ್ – ನಗರಾಭಿವೃದ್ಧಿ

ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ ಖಾತೆ

ಎಂ.ಸಿ ಸುಧಾಕರ – ವೈದ್ಯಕೀಯ ಶಿಕ್ಷಣ

ಬಿ. ನಾಗೇಂದ್ರ – ಕನ್ನಡ ಮತ್ತು ಸಂಸ್ಕೃತಿ ಹಾಗೂ ಯುವಜನ ಮತ್ತು ಕ್ರೀಡಾ

Advertisement

Leave a reply

Your email address will not be published. Required fields are marked *

error: Content is protected !!