ಶಾಲೆಗಳ ದಸರಾ ರಜೆ ಅವಧಿ ವಿಸ್ತರಣೆ ; ಮಹತ್ವದ ಆದೇಶ ಹೊರಡಿಸಿದ ಸಿಎಂ
ಬೆಂಗಳೂರು : ನಿಗದಿಪಡಿಸಿದಂತೆ ಜಾತಿ ಗಣತಿ ಮುಗಿಯದ ಹಿನ್ನಲೆಯಲ್ಲಿ ಬರುವ ಅ. 18 ರ ವರೆಗೆ ರಾಜ್ಯದ ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ದಸರಾ ರಜೆ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಮೀಕ್ಷೆದಾರರ ಬೇಡಿಕೆಯಂತೆ ಸಮೀಕ್ಷೆಯ ಅವಧಿ ವಿಸ್ತರಣೆ ಹಾಗೂ ಶಾಲೆಗಳ ರಜಾ ಅವಧಿ ವಿಸ್ತರಣೆ ಕುರಿತು ವಿಧಾನಸೌಧದಲ್ಲಿ ಇಂದು ನಡೆದ ಸಭೆ ಉದ್ದೇಶಿಸಿ ಸಿಎಂ ಮಾತನಾಡಿದರು.
ಅ. 19 ರ ಒಳಗೆ ಸರ್ವೇ ಕಾರ್ಯ ಮುಗಿಸುವಂತೆ ಸೂಚನೆ ನೀಡಲಾಗಿದೆ. ಸಮೀಕ್ಷೆಯಿಂದ ತಪ್ಪಿಸಿಕೊಂಡವರ ವಿರುದ್ಧ ಸರಕಾರ ಶಿಸ್ತು ಕ್ರಮ ಕೈಗೊಳ್ಳಲಿದೆ. ಜೊತೆ ಶಾಲೆಗಳ ರಜಾ ಅವಧಿ ವಿಸ್ತರಣೆ ಮಾಡಲಾಗಿದೆ ಎಂದರು.
ದ್ವಿತೀಯ ಪಿಯುಸಿ ಮಿಡ್ ಟರ್ಮ ಪರೀಕ್ಷೆ ಕರ್ತವ್ಯದಲ್ಲಿ ತೊಡಗಿರುವ ಶಿಕ್ಷಕರು ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಬೇಕಿಲ್ಲ ಎಂದು ಸಿಎಂ ತಿಳಿಸಿದರು.

