ಸೋತರು ವಿಶ್ವದ ಗಮನಸೆಳೆದ ಪ್ರಜ್ಞಾನಂದ ; ಈ ಯುವಕನ ಸಾಧನೆಗೆ ಸಲಾಂ ಎಂದ ಭಾರತ
ಚೆಸ್ ವಿಶ್ವಕಪ್ ಪೈನಲ್ ಪಂದ್ಯದಲ್ಲಿ ಮ್ಯಾಗ್ನಸ್ ಕಾರ್ಲ್ ಸೆನ್ ವಿರುದ್ಧ ಭಾರತದ ಆರ್. ಪ್ರಜ್ಞಾನಂದ ಸೋಲು ಅನುಭವಿಸಿದರು ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೈನಲ್ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಿಂದ ಗುರುವಾರ ಚೆಸ್ ಪಂದ್ಯದಲ್ಲಿ ಭರ್ಜರಿ ಆಟ ಮುಂದುವರಿಸಿದ್ದ ಭಾರತದ ಆರ್. ಪ್ರಜ್ಞಾನಂದ ವಿಶ್ವದ ನಂಬರ್ ಒನ್ ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ ಸೆನ್ ಗೆ ತೀವ್ರ ಪೈಪೋಟಿ ನೀಡಿದರು. ಆದರೆ ಉತ್ತಮ ಆಟ ಪ್ರದರ್ಶನ ಮಾಡಿದ್ದ ನಾರ್ವೆ ಆಟಗಾರ 1-0 ಅಂತದರಿಂದ ಗೆದ್ದು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದರು.
ವಿಶ್ವ ಚಸ್ ರ್ಯಾಂಕ್ ನಲ್ಲಿ 29 ನೇ ಸ್ಥಾನದಲ್ಲಿರುವ ಭಾರತದ ಯುವ ಆಟಗಾರ 18 ವರ್ಷದ ಆರ್. ಪ್ರಜ್ಞಾನಂದ ವಿಶ್ವದ ಗಮನಸೆಳೆದಿದ್ದಾರೆ. ಹೌದು ಸಧ್ಯ ವಿಶ್ವದ ಎರಡು ಮತ್ತು ಮೂರನೇ ಶ್ರೇಯಾಂಕದ ಆಟಗಾರರನ್ನು ಸೋಲಿಸುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದಾರೆ ಈ ಯುವಕ.
ಒಟ್ಟಿನಲ್ಲಿ ಸೋತರು ಭಾರತದ ಬಾವುಟವನ್ನು ವಿಶ್ವದೆತ್ತರಕ್ಕೆ ಹಾರಿಸುವಲ್ಲಿ ಯುವ ಆಟಗಾರ ಯಶಸ್ವಿಯಾಗಿದ್ದಾನೆ. ನಿನ್ನೆಯಷ್ಟೇ, ಚಂದ್ರಯಾನ ಯಶಸ್ವಿಯಾದ ಬೆನ್ನಲ್ಲೇ ಚೆಸ್ ಆಟದಲ್ಲಿ ಭಾರತ ಇತಿಹಾಸ ನಿರ್ಮಿಸುತ್ತದೆ ಎಂಬ ಉತ್ಸಾಹದಲ್ಲಿ ಕೋಟ್ಯಾಂತರ ಭಾರತೀಯರು ಇದ್ದರು.

