Select Page

Advertisement

ಆನೆ ಜೊತೆ ಸೆಲ್ಫಿ ತಗೆಯಲು ಹೋಗಿದ್ದವನಿಗೆ ಅರಣ್ಯ ಇಲಾಖೆ ದಂಡ ಹಾಕಿದೆಷ್ಟು..?

ಆನೆ ಜೊತೆ ಸೆಲ್ಫಿ ತಗೆಯಲು ಹೋಗಿದ್ದವನಿಗೆ ಅರಣ್ಯ ಇಲಾಖೆ ದಂಡ ಹಾಕಿದೆಷ್ಟು..?

ಚಾಮರಾಜನಗರ : ಬಂಡೀಪುರದಲ್ಲಿ (Bandipura) ಕಾಡಾನೆ (elephant) ಬಳಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಹುಚ್ಚಾಟ ಮೆರೆದಿದ್ದ ವ್ಯಕ್ತಿಗೆ ಅರಣ್ಯ ಇಲಾಖೆ (Forest Department) ದಂಡ (fine) ವಿಧಿಸಿದೆ.

ಆನೆ ದಾಳಿಯಿಂದ ಬಚಾವ್‌ ಆದ ನಂಜನಗೂಡಿನ ವ್ಯಕ್ತಿಗೆ ಇಲಾಖೆ 25,000 ರೂ. ದಂಡ ವಿಧಿಸಿದೆ.
ಫೋಟೋ ತೆಗೆಯಲು ಹೋಗಿದ್ದ ವ್ಯಕ್ತಿ ನಂಜನಗೂಡು ಮೂಲದ ಬಸವರಾಜು ಎಂದು ಗೊತ್ತಾಗಿದೆ.

ಘಟನೆ ನಡೆದ ಬಳಿಕ ಈತ ಅರಣ್ಯ ಇಲಾಖೆ ಕಣ್ತಪ್ಪಿಸಿ ಕೇರಳಕ್ಕೆ ಹೋಗಿದ್ದನು. ನಂತರ ಕರ್ನಾಟಕಕ್ಕೆ ಬಂದಿದ್ದ‌ನು. ಮೊಬೈಲ್ ಸ್ವಿಚ್ ಆಫ್ ಮಾಡಿದ್ದನು. ಕೊನೆಗೂ ಬಸವರಾಜುನನ್ನು ಅರಣ್ಯ ಸಿಬ್ಬಂದಿ ಪತ್ತೆ ಹಚ್ಚಿ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ ಇಂತಹ ಹುಚ್ಚಾಟ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.

ಬಸವರಾಜು ಜಾಗೃತಿ ವಿಡಿಯೋ..!

ಇನ್ನು, ಅರಣ್ಯ ಇಲಾಖೆ ವಿಶಿಷ್ಟ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಬಂಡೀಪುರದ ಅರಣ್ಯ ಇಲಾಖೆ ಅಧಿಕಾರಿಗಳು ಬಸವರಾಜು ಅವರಿಂದ ವಿಡಿಯೋ ಮಾಡಿಸಿದ್ದಾರೆ. ಈ ವಿಡಿಯೋದಲ್ಲಿ ಬಸವರಾಜು, ನಾನು ಬಂಕಾಪುರದ ದೇವಾಸ್ಥಾನಕ್ಕೆ ಹೋಗಿದ್ದೆ. ಅಲ್ಲಿಂದ ಬರುವಾಗ ಮೋಜು ಮಸ್ತಿಗಾಗಿ ಸೆಲ್ಫಿ, ಫೋಟೋ ತೆಗೆಯಲು ಮುಂದಾಗಿದ್ದೆ. ಈ ವೇಳೆ ಕಾಡಾನೆ ನನ್ನ ಮೇಲೆ ದಾಳಿ ನಡೆಸಿತು. ಇನ್ಮುಂದೆ ಯಾರೂ ಕೂಡ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಡಿ, ಯಾರು ಕೂಡ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಫೋಟೋ, ಸೆಲ್ಫಿ ತೆಗೆಯುವ ಕೆಲಸ ಬೇಡ ಎಂದು ಜಾಗೃತಿ ಮೂಡಿಸುವ ಮಾತಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ.

ಘಟನೆ ಏನಾಗಿತ್ತು..?

ಭಾನುವಾರ ಸಂಜೆ ಬಂಡೀಪುರದ ಕಾಡಿನ ಮಧ್ಯೆ ಫೋಟೋ ಗೀಳಿಗಾಗಿ ಆನೆ ಸನಿಹಕ್ಕೆ ತೆರಳಿದ್ದ ಪ್ರಯಾಣಿಕನ ಮೇಲೆ ಒಂಟಿಯಾನೆ ದಾಳಿ ನಡೆಸಿ ಗಾಯಗೊಳಿಸಿತ್ತು.

ಇನ್ನು, ಪ್ರಯಾಣಿಕನ ಈ ಹುಚ್ಚಾಟಕ್ಕೆ ವನ್ಯಜೀವಿ ಪ್ರಿಯರು ಆಕ್ರೋಶ ಹೊರಹಾಕಿದ್ದರು. ತಮಿಳುನಾಡಿನಿಂದ ಗುಂಡ್ಲುಪೇಟೆಗೆ ಬರುವ ಮಾರ್ಗ ಮಧ್ಯೆ ರಸ್ತೆ ಬದಿಯಲ್ಲಿ ನಿಂತಿದ್ದ ಒಂಟಿ ಆನೆಯ ಸನಿಹಕ್ಕೆ ತೆರಳಿ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದ ಆಸಾಮಿ ಬಸವರಾಜ್ ನನ್ನು ಆನೆ ಅಟ್ಟಿಸಿಕೊಂಡು ಹೋಗಿತ್ತು. ಈ ವೇಳೆ ಕೆಳಗೆ ಬಿದ್ದ ವ್ಯಕ್ತಿಯನ್ನ ಕಾಲಿನಿಂದ ಒದ್ದು ಅಲ್ಲಿಂದ ತೆರಳಿತ್ತು. ಅದೃಷ್ಟವಶಾತ್ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದನು. ನಂತರ ಆತನನ್ನ ಜೊತೆಯಲ್ಲಿದ್ದವವರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು

ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಬಂಡಿಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ತಿಳಿಸಿದ್ದರು. ಕಾಡಾನೆ ಅಟ್ಯಾಕ್ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಡೆಡ್ಲಿ ಅಟ್ಯಾಕ್ ನೋಡಿ ನೆಟ್ಟಿಗರು ಕಮೆಂಟ್ಸ್ ಸುರಿಮಳೆಗೈದಿದ್ದರು. ಇದೀಗ ಅಂತಿಮವಾಗಿ ಪ್ರವಾಸಿಗ ಬಸವರಾಜ್ ಸೆರೆಹಿಡಿದು ಫೈನ್ ಹಾಕಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!