ಚೈತ್ರಾ ಕುಂದಾಪುರಗೆ ಬುದ್ದಿವಾದ ಹೇಳಿದ ರೈತ ನಾಯಕಿ ಮಂಜುಳಾ ಪೂಜಾರಿ
ಬೆಂಗಳೂರು : ವಂಚನೆ ಪ್ರಕರಣದಲ್ಲಿ ಪೊಲೀಸ್ ವಶಕ್ಕೆ ಒಳಗಾದ ಹಿಂದೂ ಹೋರಾಟಗಾರ್ತಿ ಚೈತ್ರ ಕುಂದಾಪುರ ವಿರುದ್ಧ ಮಾಜಿ ರೈತ ನಾಯಕಿ ಮಂಜುಳಾ ಪೂಜಾರಿ ಆಕ್ರೋಶ ಹೊರ ಹಾಕಿದ್ದಾರೆ.
ತಮ್ಮ ಫೇಸ್ಬುಕ್ ಲೈವ್ ನಲ್ಲಿ ಚೈತ್ರಾ ಕುಂದಾಪುರ ವಿರುದ್ಧ ಮಾತನಾಡಿರುವ ಮಂಜುಳಾ ಪೂಜಾರಿ. ಧರ್ಮದ ಹೆಸರಿನಲ್ಲಿ ಜನಗಳ ಮಧ್ಯೆ ಬೆಂಕಿ ಹಚ್ಚುತ್ತಿದ್ದೀರಿ. ಒಂದು ಸಮುದಾಯದ ವಿರುದ್ಧ ಮಾತನಾಡಿದ್ದು ಏಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಷ್ಟೇ ಅಲ್ಲದೆ. ಚೈತ್ರಾ ಕುಂದಾಪುರ ವಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಇವರು. ವಂಚನೆ ಮಾಡಿದ್ದು ನಿಜವಾಗಿದ್ದಲ್ಲಿ ಸರಿಯಾದ ಶಿಕ್ಷೆ ಆಗಲಿ. ಹಾಗೇಯೇ ಅನವಶ್ಯಕ ಆರೋಪ ಹೊರಿಸುವುದು ನಿಲ್ಲಿಸು ಎಂದು ಮಂಜುಳಾ ಹೇಳಿದ್ದಾರೆ.
ಒಟ್ಟಿನಲ್ಲಿ ಚೈತ್ರಾ ಕುಂದಾಪುರ ಅವರ ವಿರುದ್ಧ ರೈತ ನಾಯಕಿ ಮಂಜುಳಾ ಪುಜಾರ್ ಆಕ್ರೋಶ ಹೊರ ಹಾಕಿರುವ ವೀಡಿಯ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.


