
ಬೆಳಗಾವಿಗೆ ಬಂದ ಸಿ.ಟಿ ರವಿ ; ಶಕ್ತಿ ದೇವತೆ ಆಶಿರ್ವಾದ

ಬೆಳಗಾವಿ : ಬೆಳಗಾವಿ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಅಶ್ಲೀಲ ಪದಬಳಕೆ ಪ್ರಕರಣದ ನಂತರ ಮೊದಲಬಾರಿಗೆ ಬೆಳಗಾವಿ ಮಗರಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಭೇಟಿ ನೀಡಿದ್ದಾರೆ.
ಶುಕ್ರವಾರ ಸಂಜೆ ಹುಬ್ಬಳ್ಳಿ ಮಾರ್ಗವಾಗಿ ಸವದತ್ತಿಗೆ ಆಗಮಿಸಿದ ಇವರು ಯಲ್ಲಮ್ಮ ದೇವಿ ದರ್ಶನ ಪಡೆದುಕೊಂಡರು. ನಗರದ ಖಾಸಗಿ ಹೊಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದು, ಶನಿವಾರ ಬೆಳಿಗ್ಗೆ ಐತಿಹಾಸಿಕ ಕಪಿಲೇಶ್ವರ ಮಂದಿರಕ್ಕೆ ಭೇಟಿನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 9 ಗಂಟೆಗೆ ಖಾಸಗಿ ಹೊಟೇಲ್ ನಲ್ಲಿ ನ್ಯಾಯವಾದಿಗಳ ಜೊತೆ ಸಭೆ ನಡೆಸಲಿದ್ದು. ನಂತರ ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಮಧ್ಯಾಹ್ನ 1:30 ಕ್ಕೆ ಖಾನಾಪುರದ ನಂದಗಡದಲ್ಲಿರುವ ರಾಯಣ್ಣನ ಸಮಾಧಿಗೆ ಭೇಟಿ ನೀಡಲಿದ್ದಾರೆ.
ಮದ್ಯಾಹ್ನ 3 ಗಂಟೆಗೆ ಕಿತ್ತೂರಿನ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದು, ಸಂಜೆ 4 ಗಂಟೆಗೆ ಬೆಳಗಾವಿಯ ಗೊಮಟೇಶ ವಿದ್ಯಾಪೀಠದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಿಟಿ ರವಿ ಪಾಲ್ಗೊಳ್ಳಲಿದ್ದಾರೆ.