ಶೂಟ್ ಮಾಡಿಕೊಂಡು ಉದ್ಯಮಿ ಸಾವು ; ಕಾರಣ ಏನು..?

ಬೆಂಗಳೂರು : ಭಾರತದ ಶ್ರೀಮಂತ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರುಪ್ ಮಾಲಿಕ ಸಿ.ಜೆ ರಾಯ್ (C.J.Roy ) ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರಿನ ಆನೇಪಾಳ್ಯ ಪ್ರದೇಶದಲ್ಲಿರುವ ತಮ್ಮ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಗತ್ಯ ದಾಖಲೆ ಹಾಗೂ ಸಾಕ್ಷಿ ಹುಡುಕಾಟಕಕ್ಕೆ ತೊಡಗಿದ್ದಾರೆ.
ತಮ್ಮ ಮೇಲೆ ಪದೇ ಪದೇ ನಡೆಯುತ್ತಿದ್ದ ಆದಾಯ ತೆರಿಗೆ ಇಲಾಖೆ ನಡೆಸುತ್ತಿದ್ದ ದಾಳಿಗೆ ಹೆದರಿ ಸಿ.ಜೆ ರಾಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಖಿನ್ನತೆ ಕಾರಣಕ್ಕೆ ಇವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂಬ ವಾದವೂ ಇದೆ. ( Confident Group )
12 ರೋಲ್ಸ್ ರಾಯ್ಸ್ ಕಾರಿನ ಮಾಲಿಕರಾದ ಸಿ.ಜೆ ರಾಯ್ ಅವರು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೋಟ್ಯಾಂತರ ರೂ. ಆಸ್ತಿ ಹೊಂದಿದ್ದಾರೆ. ಜಗತ್ತಿನ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಹೊಂದಿದ್ದ ಸಿ.ಜೆ ರಾಯ್ ದುರಂತ ಅಂತ್ಯ ಕಂಡಿದ್ದಾರೆ.

