ಬೆಳಗಾವಿ ಅಧಿವೇಶನಕ್ಕೆ ಬಂದಿದ್ದ ಶಾಸಕ ನಾಪತ್ತೆ…! ಪತ್ತೆಗೆ ಮೂರು ತಂಡ ರಚನೆ
ಬೆಳಗಾವಿ : ಹತ್ತು ದಿನಗಳವರೆಗೆ ನಡೆದ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಶಾಸಕ ನಾಪತ್ತೆಯಾಗಿದ್ದಾರೆ. ಸಧ್ಯ ಇವರ ಹುಡುಕಾಟಕ್ಕೆ ಮೂರು ವಿಶೇಷ ತಂಡ ರಚನೆ ಮಾಡಲಾಗಿದೆ.
ಹೌದು ಬೆಂಗಳೂರಿನ ರೌಡಿಶೀಟರ್ ಬಿಕ್ಲು ಶಿವ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜು ಹೆಸರು ಸೇರಿಕೊಂಡಿದೆ. ಈಗಾಗಲೇ ಹೈಕೋರ್ಟ್ ಹಾಗೂ ಸೆಷನ್ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ರದ್ದಾಗಿದ್ದು ಅಧಿವೇಶನಕ್ಕೆ ಬಂದ ಶಾಸಕ ನಾಪತ್ತೆಯಾಗಿದ್ದಾನೆ.
ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಹಾರಾಷ್ಟ್ರದ ಹಲವು ಭಾಗಗಳಿ ಶಾಸಕರು ಸುತ್ತಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಗೋವಾದ ಕೆಲ ಭಾಗದಲ್ಲಿಯೂ ಸಂಚರಿಸಿರುವ ಸಾಧ್ಯತೆ ದಟ್ಟವಾಗಿದೆ.
ಶಾಸಕರನ್ನು ಬಂಧಿಸಲು ಈಗಾಗಲೇ ಸಿಐಡಿ ಮೂರು ವಿಶೇಷ ತನಿಖಾ ತಂಡ ರಚನೆ ಮಾಡಿದೆ. ಅಷ್ಟೇ ಅಲ್ಲದೆ ಹೊರ ರಾಜ್ಯದ ಪೊಲೀಸರ ಜೊತೆ ನಿರಂತರ ಸಂಪರ್ಕ ಸಾಧಿಸಲಾಗುತ್ತಿದೆ. ಈ ಮಧ್ಯೆ ಹೊರ ದೇಶಕ್ಕೆ ಪರಾರಿಯಾದ ಶಂಕೆ ಇದ್ದು ಶಾಸಕರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.


