ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕ ; ಕಮಲಕ್ಕೆ ಬಿಗ್ ಶಾಕ್
ಬೆಂಗಳೂರು : ಬಿಜೆಪಿ ಶಾಸಕ ಎಸ್,ಟಿ ಸೋಮಶೇಖರ್ ಅವರು ಕೊನೆಗೂ ಅಡ್ಡಮತದಾನ ಮಾಡಿದ್ದು ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯರಿಗೆ ಮತದಾನ ಮಾಡುವ ಮೂಲಕ ಕಮಲ ಪಾಳೆಯಕ್ಕೆ ಶಾಕ್ ನೀಡಿದ್ದಾರೆ.
ಬಿಜೆಪಿ ವಿಪ್ ಜಾರಿ ಮಾಡಿದರೂ ಇದಕ್ಕೆ ತಲೆ ಕೆಡಿಸಿಕೊಳ್ಳದ ಎಸ್,ಟಿ ಸೋಮಶೇಖರ್ ಕೊನೆಗೂ ಕಾಂಗ್ರೆಸ್ ಗೆ ಮತದಾನ ಮಾಡುವ ಮೂಲಕ ಬಿಜೆಪಿ ವಿರೋಧ ನಡೆ ಅನುಸರಿಸಿದ್ದಾರೆ. ಸಧ್ಯಕ್ಕೆ ಇದರಿಂದ ಬಿಜೆಪಿಗೆ ಯಾವುದೇ ನಷ್ಟ ಆಗುವುದಿಲ್ಲ.
ನಾಲ್ಕು ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ಇಂದು ನಡೆಯುತ್ತಿದ್ದು, ಬಿಜೆಪಿಯ ಓರ್ವ ಸದಸ್ಯ, ಕಾಂಗ್ರೆಸ್ ನಿಂದ ಮೂವರು ಆಯ್ಕೆಯಾಗಲಿದ್ದಾರೆ. ಆದರೆ ಉಳಿದ ಬಿಜೆಪಿ ಮತಗಳನ್ನು ನೆಚ್ಚಿಕೊಂಡಿರುವ ಜೆಡಿಎಸ್ ಐದನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು ಚುನಾವಣೆ ರಂಗು ಪಡೆದಿದೆ.

