Select Page

Advertisement

18 ಬಿಜೆಪಿ ಶಾಸಕರ ಅಮಾನತು ; ಸ್ಪೀಕರ್ ಆದೇಶ

18 ಬಿಜೆಪಿ ಶಾಸಕರ ಅಮಾನತು ; ಸ್ಪೀಕರ್ ಆದೇಶ

ಬೆಂಗಳೂರು : ಬಜೆಟ್ ಮೇಲೆ ಇಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ ಬಜೆಟ್ ಹಾಳೆ ಎಸೆದು ಸ್ಪೀಕರ್ ಸ್ಥಾನದ ಮುಂದೆ ಗದ್ದಲ ಮಾಡಿದ್ದಕ್ಕೆ ಬಿಜೆಪಿ ಯ 18 ಶಾಸಕರನ್ನು ಅಮಾನತು ಮಾಡಲಾಗಿದೆ.

ವಿಧಾನಸಭೆ ಕಲಾಪದ ವೇಳೆ ರಾಜಣ್ಣ ಅವರ ಹನಿಟ್ರ್ಯಾಪ್ ವಿಚಾರವಾಗಿ ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕರು ಬಜೆಟ್ ಪ್ರತಿ ಹರಿದು ಸ್ಪೀಕರ್ ಗೆ ಎಸೆದು ಸಕರಕಾರ ವಿರುದ್ಧ ಘೋಷಣೆ ಕೂಗಿದರು.

ಬಿಜೆಪಿ ಶಾಸಕರ ನಡೆಯಿಂದ ಸದನಕ್ಕೆ ಅಗೌರವ ತೋರಲಾಗಿದೆ ಎಂದು ಬಿಜೆಪಿಯ 18 ಜನ ಶಾಸಕರನ್ನು ಮುಂದಿನ 6 ತಿಂಗಳ ವರೆಗೆ ಕಲಾಪದಲ್ಲಿ ಬಾಗಿ ಆಗದಂತೆ ಅಮಾನತು ಮಾಡಿ ಸ್ಪೀಕರ್ ಖಾದರ್ ಆದೇಶ ಹೊರಡಿಸಿದ್ದಾರೆ.

ಅಮಾನತುಗೊಂಡ ಶಾಸಕರು : ಅಶ್ವಥ್ ನಾರಾಯಣ, ಉಮಾನಾಥ್ ಖೋಟ್ಯಾನ್, ಯಶ್ಪಾಲ್ ಸುವರ್ಣ, ಶರಣು ಸಲಗಾರ, ಬಸವರಾಜ ಮತ್ತಿಮುಡು, ಧೀರಜ್ ಮುನಿರಾಜು, ಚನ್ನಬಸಪ್ಪ ಚನ್ನಿ, ಬಿ.ಪಿ ಹರೀಶ್, ದೊಡ್ಡಣ್ಣಗೌಡ ಪಾಟೀಲ್,
ಎಸ್.ಆರ್ ವಿಶ್ವನಾಥ, ಬಿ.ಆರ್ ಬಸವರಾಜ, ಎಂ.ಆರ್ ಪಾಟೀಲ್, ಬಿ. ಸುರೇಶ್ ಗೌಡ, ಡಾ. ಶೈಲೇಂದ್ರ ಬೆಲ್ದಾಳೆ, ಸಿ. ಕೆ ರಾಮಮೂರ್ತಿ, ಮುನಿರತ್ನ, ಡಾ. ಭರತ್ ಶೆಟ್ಟಿ, ಡಾ. ಚಂದ್ರು ಲಮಾಣಿ.

Advertisement

Leave a reply

Your email address will not be published. Required fields are marked *

error: Content is protected !!