ಬಿಗ್ ಬಾಸ್ ಮನೆಯಲ್ಲಿ ಸಿಗರೇಟ್ ಸೇದಲು ಅವಕಾಶ ಇದೆಯಾ ಪ್ರಶ್ನೆಗೆ ನಟ ಸುದೀಪ್ ಕೊಟ್ಟ ಉತ್ತರ ಏನು…?
ಬೆಂಗಳೂರು : ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಸಿಗರೇಟ್ ಸೇದಲು ಅವಕಾಶ ಇದೆಯೇ? ಇದ್ದರೆ ಎಷ್ಟು ಸೇದಬಹುದು ಎಂಬ ಪ್ರಶ್ನೆಗೆ ನಟ ಕಿಚ್ಚ ಸುದೀಪ್ ಅತ್ಯಂತ ತೀಕ್ಷ್ಣ ಉತ್ತರ ನೀಡಿದರು.
ಕೆಲ ವ್ಯಕ್ತಿಗಳು ವಿಭಿನ್ನ ವ್ಯಕ್ತಿತ್ವ ಹೊಂದಿರುತ್ತಾರೆ. ಅಂತವರಿಗೆ ತಮ್ಮ ವೈಯಕ್ತಿಕವಾಗಿ ಹಲವು ಅಭ್ಯಾಸಗಳನ್ನು ಹೊಂದಿರುತ್ತಾರೆ. ನಾವು ಯಾವುದಕ್ಕೂ ಅವಕಾಶ ಇಲ್ಲ ಎಂದರೆ ಅವರು ಇಲ್ಲಿ ಬರುವುದಿಲ್ಲ. ಇದರಿಂದ ನಮಗೆ ಹಾನಿ. ಈ ಉದ್ದೇಶದಿಂದ ಕೆಲವನ್ನು ಅಳವಡಿಸಬೇಕು ಎಂದರು. ( Bigg Boss )
ಕೆಸಿಎಲ್ ಪಂದ್ಯಾವಳಿ ಆಡುವ ಸಂದರ್ಭದಲ್ಲಿ ನಾನು ಅನೇಕ ಪತ್ರಕರ್ತರು ಸೇರಿದಂತೆ ಹಲವರಿಗೆ ಸಿಗರೇಟ್ ಸೇದದಂತೆ ಎಚ್ಚರಿಸಿದ್ದೆ. ಆದರೆ ಕೆಲವರು ಮರೆಮಾಚಿ ಬಂದು ಆಡುತ್ತಿದ್ದರೆ. ಕೆಲವು ಸಂದರ್ಭಗಳಲ್ಲಿ ಏನು ಮಾಡಲು ಸಾಧ್ಯವಲ್ಲ. ಆದರೆ ನಾವು ಕೆಲವನ್ನು ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತೇವೆ ಎಂದರು.
ಬಿಗ್ ಬಾಸ್ ಮನೆಯಲ್ಲಿ ಕೆಲವರು ಸಿಗರೇಟ್ ಸೇದುವುದನ್ನು ಅತ್ಯಂತ ಕಡಿಮೆ ಮಾಡಿದ್ದರು. ಆ ಚಟವನ್ನು ಒಂದು ಹಂತದಲ್ಲಿ ಹತೋಟಿಗೆ ತಗೆದುಕೊಂಸ ಅನೇಕ ನಿದರ್ಶನ ನಮ್ಮ ಬಳಿ ಇದೆ ಎಂದು ಅತ್ಯಂತ ಮಾರ್ಮಿಕವಾಗಿ ನಟ ಕಿಚ್ಚ ಸುದೀಪ್ ( Kicha Sudeep ) ಉತ್ತರಿಸಿದರು.


