
ಬಿಗ್ ಬಾಸ್ ಸೀಜನ್ – 10 ಸ್ಪರ್ಧಿಗಳು ಯಾರು..? ನಿಮ್ಮ ಆಯ್ಕೆ ಯಾರದು

ಬೆಂಗಳೂರು : ಕಳೆದ ಒಂಬತ್ತು ಸೀಜನ್ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಬಿಗ್ ಶೋ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಕನ್ನಡ ( Big Boss – 10 ) ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ.
ಸ್ಯಾಂಡಲ್ ವುಡ್ ( Sandalwood ) ಖ್ಯಾತ ಹೀರೊ ಕಿಚ್ಚ ಸುದೀಪ್ ( kichha Sudeep ) ನಿರೂಪಣೆ ಮಾಡುವ ಬಿಗ್ ಬಾಸ್ ಶೋ ಸಧ್ಯ ಕನ್ನಡದ ಟಾಪ್ ರಿಯಾಲಿಟಿ ಶೋ ಗಳಲ್ಲಿ ಒಂದು. ಸಧ್ಯ ಕಲರ್ಸ್ ಕನ್ನಡ ( Color’s Kannada ) ವಾಹಿನಿಯಲ್ಲಿ ಪ್ರಸಾರ ಆಗಲಿದ್ದು ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾರಂಭವಾಗುವ ಲಕ್ಷಣಗಳಿವೆ.
ಬಿಗ್ ಬಾಸ್ ಕನ್ನಡ ಸೀಸನ್ 10ಗೆ ಪೂರ್ವ ತಯಾರಿ ನಡೆಯುತ್ತಿದೆ. ದುಬಾರಿ ರಿಯಾಲಿಟಿ ಶೋಗಳನ್ನು ನಡೆಸಿಕೊಡುವ ಎಂಡಲೋಲ್ ಸಂಸ್ಥೆ ಕರ್ನಾಟಕದಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿದೆ. ಕಲರ್ಸ್ ಕನ್ನಡ ಹಾಗೂ ಎಂಡಮೋಲ್ ಕಾಂಬಿನೇಷನ್‌ನಲ್ಲಿ ಬಿಗ್ ಬಾಸ್ ಸೀಸನ್ 10 ಶೀಘ್ರವೇ ಆರಂಭ ಆಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 10 ಪ್ರೋಮೊ ಕೂಡ ರಿಲೀಸ್ ಆಗಲಿದೆ.
ಸಧ್ಯ ಬಿಗ್ ಬಾಸ್ – 10 ಕ್ಕೆ ಹೋಗುವವರು ಯಾರು ಎಂಬ ಪ್ರಶ್ನೆ ಎಲ್ಲೆಡೆ ಸಾಮಾನ್ಯವಾಗಿದೆ. ಈಗ ಒಡಾಡುತ್ತಿರುವ ಹೆಸರುಗಳಲ್ಲಿ ಬಹು ಪ್ರಮುಖವಾಗಿ
ಅದರಲ್ಲಿ ‘ನಾಗಿಣಿ’ ಧಾರಾವಾಹಿ ಖ್ಯಾತಿಯ ನಮ್ರತಾ ಗೌಡ, ಸೋಶಿಯಲ್ ಮೀಡಿಯಾ ಸೆಲೆಬ್ರೆಟಿ ಭೂಮಿಕಾ ಬಸವರಾಜ್, ನಟ ಸುನೀಲ್ ರಾವ್, ಮಾನಸಿ ಜೋಷಿ ಸೇರಿದಂತೆ ಹಲವರ ಹೆಸರುಗಳು ಕೇಳಿ ಬರುತ್ತಿದೆ.
೦೧ ) ನಮ್ರತಾ ಗೌಡ,
೦೨ ) ಭೂಮಿಕಾ ಬಸವರಾಜ್
೦೩ ) ನಟ ಸುನೀಲ್ ರಾವ್
೦೪ ) ಮಾನಸಿ ಜೋಷಿ
೦೫ ) ದಿ. ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್
೦೬ ) ಕ್ರಿಮಿನಲ್ ವಕೀಲ ನಾಗರಾಜ ಕುಡಪಲಿ
ಇನ್ನೂ ಅನೇಕ ಹೆಸರುಗಳು ಸಧ್ಯ ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಕನ್ನಡಿಗರಿಗೆ ಭರ್ಜರಿ ಮನರಂಜನೆ ನೀಡುವ ಕನ್ನಡ ಬಿಗ್ ಬಾಸ್ ಈ ಬಾರಿ ಹೊಸ ನಿರೀಕ್ಷೆಗಳೊಂದಿಗೆ ಬರಲಿದ್ದು, ಜನ ಅಷ್ಟೇ ಉತ್ಸಾಹದಿಂದ ಕಾಯುತ್ತಿದ್ದಾರೆ.