Select Page

Advertisement

ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಕಿಡಿಗೇಡಿಗಳು

ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಕಿಡಿಗೇಡಿಗಳು

ಬೀದರ್ : ಮಸೀದಿ ಮೇಲೆ‌ ಕಿಡಿಗೇಡಿಗಳು ಭಗವಾಧ್ವಜ ಹಾರಿಸಿದ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣದ ಧನ್ನೂರಾ ಕೆ. ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹೊರವಲಯದಲ್ಲಿರುವ ಮಸೀದಿ ಮೇಲೆ ಕಿಡಿಗೇಡಿಗಳು ತಡರಾತ್ರಿ ಭಗವಾಧ್ವಜ ಹಾರಿಸಿ ಪರಾರಿಯಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ  ಪ್ರಕ್ಷುಬ್ಧ ವಾತಾವರಣದ ನಿರ್ಮಾಣವಾಗಿತ್ತು.

ಇನ್ನೂ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮದ ಜನರನ್ನು ಸೇರಿಸಿ ಸಭೆ ಮಾಡುವ ಮೂಲಕ ಶಾಂತಿ ಮೂಡಿಸುವ ಪ್ರಯತ್ನ  ಮಾಡಿದರು.

Advertisement

Leave a reply

Your email address will not be published. Required fields are marked *

error: Content is protected !!