ಭಾರತೀಯ ಸೇನೆಗೆ ಸೇರಿದ ಕಾಂಗ್ರೆಸ್ ನಾಯಕಿ ಭವ್ಯ ನರಸಿಂಹಮೂರ್ತಿ
ಬೆಂಗಳೂರು : ತಮ್ಮ ಹರಿತವಾದ ಮಾತಿನಿಂದಲೇ ಕಾಂಗ್ರೆಸ್ ವಲಯದಲ್ಲಿ ಗುರುತಿಸಿಕೊಂಡಿದ್ದ ಯುವ ನಾಯಕಿ ಭವ್ಯ ನರಸಿಂಹಮೂರ್ತಿ ಭಾರತೀಯ ಸೇನೆ ಸೇರಿವ ಮೂಲಕ ಗಮನಸೆಳೆದಿದ್ದಾರೆ. ಹಾಗಾದರೆ ಇವರು ಕೈಯಲ್ಲಿ ಗನ್ ಹಿಡಿದು ಯುದ್ದಕ್ಕೆ ಹೋಗುತ್ತಾರಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ ಈ ಕುರಿತಾದ ಸಂಪೂರ್ಣ ಮಾಹಿತಿ ಕೆಳಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರ ಪ್ರೀತಿ ಗಳಿಸಿರುವ ಭವ್ಯ ಅವರಿಗೆ ಯುವ ಕಾಂಗ್ರೆಸ್ ವಲಯದಲ್ಲಿ ಜನಪ್ರಿಯತೆ ಇದೆ. ಸಧ್ಯ ಇವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾರತೀಯ ಸೇನೆಯ ವಸ್ತ್ರದಲ್ಲಿ ಹಾಕಿರುವ ಪೋಟೋಗಳು ಸಖತ್ ವೈರಲ್ ಆಗುತ್ತಿದ್ದು ಮತ್ತೊಂದು ಕಾರಣ.
ಭಾರತೀಯ ಸೇನೆಯ ಮೀಸಲು ಘಟಕವಾದ ಟೆರಿಟೋರಿಯಲ್ ಆರ್ಮಿಯನ್ನು ಭವ್ಯ ನರಸಿಂಹಮೂರ್ತಿ ಸೇರ್ಪಡೆ ಆಗಿದ್ದು ಈ ಕುರಿತು ಪೋಟೋ ಹಂಚಿಕೊಂಡಿದ್ದಾರೆ.
ಡಿಜಿಟಿಎ 2022 ರಲ್ಲಿ ನಡೆಸಿದ ಟಿಎ ಪರೀಕ್ಷೆಯಲ್ಲಿ ಪಾಸಾಗಿರುವ ದಕ್ಷಿಣ ಭಾರತದ ಮೊದಲ ಮಹಿಳೆ ಎಂಬ ಗೌರವಕ್ಕೆ ಇವರು ಕಾರಣರಾಗಿದ್ದಾರೆ.
ಟೆರಿಟೋರಿಯಲ್ ಆರ್ಮಿಯಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುವ ಅವಕಾಶವಿದೆ. ದೇಶದಾದ್ಯಂತ ಐದು ವಲಯಗಳನ್ನು ಹೊಂದಿರುವ ಈ ಸೇನೆಯಲ್ಲಿ 40,000 ಕ್ಕೂ ಅಧಿಕ ಸ್ವಯಂಸೇವಕರಿದ್ದಾರೆ ಇದರಲ್ಲಿ ಭವ್ಯಾ ಕೂಡ ಒಬ್ಬರು. ಇಲ್ಲಿ ಪ್ರಮುಖವಾಗಿ ಮಾಜಿ ಕ್ರಿಕೆಟ್ ಆಟಗಾರರಾದ ಮಹೇಂದ್ರ ಸಿಂಗ್ ದೋನಿ ಸೇರಿದಂತೆ ಅನೇಕರಿದ್ದಾರೆ.
ಟೆರಿಟೋರಿಯಲ್ ಆರ್ಮಿಯಲ್ಲಿ ಡಿಪಾರ್ಟಮೆಂಟಲ್ ವಿಭಾಗದಲ್ಲಿ ಭಾರತೀಯ ನಾಗರಿಕ ಸೇವಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈಲ್ವೆಯ ನಿವೃತ್ತರು ಸೇರಿಕೊಳ್ಳಬಹುದು ಅವಕಾಶವಿದೆ. ಇದಕ್ಕಾಗಿಯೇ ಭಾರತೀಯ ಸೇನೆ ವಿಶೇಷ ಸೌಲಭ್ಯವನ್ನು ಕಲ್ಪಿಸಿದೆ.
ನಾನ್ ಡಿಪಾರ್ಟಮೆಂಟಲ್ನಲ್ಲಿ ಯಾವುದೇ ಭಾರತೀಯ ನಾಗರಿಕರು ಸೇರಿಕೊಳ್ಳಬಹುದು. ಭವ್ಯಾ ಅವರು ನಾನ್ ಡಿಪಾರ್ಟಮೆಂಟಲ್ ವಿಭಾಗದಿಂದ ಕಮಿಷನ್ಡ್ ಆಫೀಸರ್ ಆಗಿದ್ದು ಮುಂದಿನ ಕೆಲ ದಿನ ಕಾಶ್ಮೀರದಲ್ಲಿಯೇ ಸೇವೆ ಸಲ್ಲಿಸುವರು.


