Select Page

Advertisement

ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಎ ಕಿಡ್ಜ್ ಫ್ರೀ ಸ್ಕೂಲ್

ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಎ ಕಿಡ್ಜ್ ಫ್ರೀ ಸ್ಕೂಲ್

ಬೆಂಗಳೂರು : ನಗರದ ಅತ್ತಿಬೆಲೆ ಎ ಕಿಡ್ಜ್ ಫ್ರೀ ಸ್ಕೂಲ್ ನಲ್ಲಿ ದೇಶದ ಎಲ್ಲಾ ರಾಜ್ಯಗಳ ಕಲೆ, ಸಾಹಿತ್ಯ, ಸಂಸ್ಕೃತಿ ತಿಳಿಸುವ ನಿಟ್ಟಿನಲ್ಲಿ ವಿವಿಧತೆಯಲ್ಲಿ ಏಕತೆ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಕ್ಕಳಿಗೆ ಬಾಲ್ಯದಲ್ಲೇ ದೇಶದ ನಾನಾ ಭಾಗಗಳ ಭಾಷೆ ಹಾಗೂ ಅಲ್ಲಿನ ಉಡುಗೆ ತೊಡುಗೆಗಳ ಕುರಿತು ಅರಿವು ಮೂಡಿಸಲು ಹಾಗೆಯೆ ಹಲವಾರು ಸಂಪ್ರದಾಯಗಳ ಮಧ್ಯೆ ಏಕತೆ ಸ್ಥಂಭವಾಗಿರುವ ಭಾರತದ ಕುರಿತು ಮಕ್ಕಳಿಗೆ ಅಭಿಮಾನ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿವಿಧ ರಾಜ್ಯದ ಉಡುಪು ತೊಟ್ಟು ಮಕ್ಕಳು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಜೆ.ಎಸ್ ಸಂತೋಷ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!