Select Page

ಪತ್ರಕರ್ತ ಮಂಜುನಾಥ ಪಾಟೀಲ್ ಸೇರಿ ನಾಲ್ವರಿಗೆ ಸಾರ್ವಜನಿಕ ವಾಚನಾಲಯ ಪ್ರಶಸ್ತಿ

ಪತ್ರಕರ್ತ ಮಂಜುನಾಥ ಪಾಟೀಲ್ ಸೇರಿ ನಾಲ್ವರಿಗೆ ಸಾರ್ವಜನಿಕ ವಾಚನಾಲಯ ಪ್ರಶಸ್ತಿ



ಬೆಳಗಾವಿ : ಬೆಳಗಾವಿ ಸಾರ್ವಜನಿಕ ವಾಚನಾಲಯದಿಂದ ಕೊಡಮಾಡುವ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಮಂಜುನಾಥ ಪಾಟೀಲ್ ಸೇರಿ ನಾಲ್ವರು ಆಯ್ಕೆಯಾಗಿದ್ದಾರೆ.

ಸಾರ್ವಜನಿಕ ವಾಚನಾಲಯದ ವತಿಯಿಂದ ನೀಡಲಾಗುವ “ ಸಾರ್ವಜನಿಕ ವಾಚನಾಲಯ ಬೆಳಗಾವಿ ಪತ್ರಕರ್ತ ಪ್ರಶಸ್ತಿ 2025 ” ರ ಕನ್ನಡ ವಿಭಾಗದಲ್ಲಿ ಬೆಳಗಾವಿ ಪವರ್ ಟಿ.ವಿ ಜಿಲ್ಲಾ ಪ್ರತಿನಿಧಿ ಮಂಜುನಾಥ ಪಾಟೀಲ್, ಮರಾಠಿ ವಿಭಾಗದಲ್ಲಿ ಬೆಳಗಾವಿಯ ದೈನಿಕ ತರುಣ ಭಾರತ ಪ್ರತಿನಿಧಿ ಸುಶಾಂತ್ ಕುರಂಗಿ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.


ಇನ್ನು ಪ್ರಾ. ಎಸ್. ಆರ್. ಜೋಗ್ ಮಹಿಳಾ ಪತ್ರಕರ್ತ ಪ್ರಶಸ್ತಿ 2025 ರ ಮರಾಠಿ ವಿಭಾಗದಲ್ಲಿ ಬೆಳಗಾವಿ ಪುಢಾರಿ ನ್ಯೂಸ್ ಟಿ.ವಿ ಜಿಲ್ಲಾ ಪ್ರತಿನಿಧಿ ಸೌ. ಅಕ್ಷತಾ ವಾಮನ್ ನಾಯಕ್ ಹಾಗೂ ಕನ್ನಡ ವಿಭಾಗದಲ್ಲಿ ಚಿಕ್ಕೋಡಿಯ ದೈನಿಕ ಹೊಸದಿಗಂತ ಪ್ರತಿನಿಧಿ ವಿಮಲಾ ಸಿ. ಚಿನಕೇಕರ್ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಈ ಪ್ರಶಸ್ತಿ ನಗದು ಹಣ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಈ ಪ್ರಶಸ್ತಿಗಳು ಒಳಗೊಂಡಿದೆ. ಬರುವ ರವಿವಾರ ಸಾಯಂಕಾಲ 5:30 ಕ್ಕೆ ಬೆಳಗಾವಿಯ ಗೋವಾವೇಸ್ ಹತ್ತಿರವಿರುವ ಖಾನಾಪುರ ರಸ್ತೆಯ ‘ಮರಾಠಾ ಮಂದಿರ’ದಲ್ಲಿ ಆಯೋಜಿಸಲಾದ ಬ್ಯಾರಿಸ್ಟರ್ ನಾಥ ಪೈ ಉಪನ್ಯಾಸ ಮಾಲೆಯ ಉದ್ಘಾಟನಾ ಸಮಾರಂಭದಲ್ಲಿ ಗೌರವಪೂರ್ವಕವಾಗಿ ಪ್ರದಾನ ಮಾಡಲಾಗುತ್ತದೆ ಎಂದು‌ ಆಯೋಜಕರು ತಿಳಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!