
ಗಬ್ಬೆದ್ದ ಚರಂಡಿಯಿಂದ ಜನ ಹೈರಾಣು ; ಮಂಗಳವಾರಪೇಟ್ ಜನರ ಗೋಳು ಕೇಳುವರಾರು…?

ಬೆಳಗಾವಿ : ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ಬೆಳಗಾವಿಯ ನಗರದ ಅಸಲಿ ಕಥೆ ಬೆರೆ ಇದೆ. ಟಿಳಕವಾಡಿಯ ವಾರ್ಡ್ – 29 ಸಂಪೂರ್ಣ ಅವ್ಯವಸ್ಥೆ ಆಗರವಾಗಿದೆ. ಇಲ್ಲಿನ ಗಬ್ಬದ್ದು ನಾರುತ್ತಿರುವ ಚರಂಡಿಯಿಂದ ಜನ ಕಂಗಾಲಾಗಿದ್ದಾರೆ.
ಹೌದು ವಾರ್ಡ್ ನಂ – 29 ರ ಮಂಗಳವಾರಪೇಟ್ ನಲ್ಲಿ ಚರಂಡಿ ಸಂಪೂರ್ಣ ಕಸಗಳಿಂದ ತುಂಬಿಕೊಂಡಿದ್ದು ಕೊಳಚೆ ನೀರು ಗಬ್ಬೆದ್ದು ನಾರುತ್ತಿದೆ. ಇದರಿಂದ ರೋಗ ಹರಡುವ ಭೀತಿ ಎದುರಾಗಿದೆ. ಈ ಕುರಿತು ಸ್ಥಳೀಯರು ಪಾಲಿಕೆ ಸಿಬ್ಬಂದಿ ಹಾಗೂ ವಾರ್ಡ್ ಸದಸ್ಯರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಲಿಲ್ಲ.
ಚರಂಡಿ ಅವ್ಯವಸ್ಥೆಯಿಂದ ಜನ ಕಂಗಾಲಾಗಿದ್ದು, ಇತ್ತ ಪಾಲಿಕೆ ಸಿಬ್ಬಂದಿ ಸೌಜನ್ಯಕ್ಕೂ ಮಾತನಾಡದೆ ಮೌನ ವಹಿಸಿದ್ದಾರೆ. ಇನ್ನೂ ಬೆಳಗಾವಿ ಮಹಾನಗರ ಪಾಲಿಕೆಗೆ ಸಮಗ್ರ ಪ್ರಶಸ್ತಿ ನೀಡಿರುವ ಕೇಂದ್ರ ಅದ್ಯಾವ ಆಧಾರದಲ್ಲಿ ನೀಡಿದೆ ದೇವರಿಗೆ ಗೊತ್ತು. ಇಷ್ಟೆಲ್ಲಾ ಸಮಸ್ಯೆ ಇದ್ದರು ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದು ವಿಪರ್ಯಾಸವೇ ಸರಿ.