ಬೆಳಗಾವಿಗೆ ಬಂದ್ರು ಹೊಸ DCP ; ರೋಹಣ ಜಗದೀಶ್ ನೇಮಕ
ಬೆಳಗಾವಿ : ನಗರದ ಪೊಲೀಸ್ ಆಯುಕ್ತ ಕಚೇರಿಗೆ ನೂತನ ಡಿಸಿಪಿಯಾಗಿ ರೋಹಣ ಜಗದೀಶ್ ನೇಮಕಗೊಂಡಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಚ್.ಟಿ.ಶೇಖರ ವರ್ಗಾವಣೆಯಾಗಿದ್ದು, ತೆರವಾದ ಸ್ಥಾನಕ್ಕೆ ರೋಹಣ ಜಗದೀಶ್ ನೇಮಕಗೊಂಡಿದ್ದಾರೆ.
2019 ರ ಯಪಿಎಸ್ಸಿ ಪರೀಕ್ಷೆಯಲ್ಲಿ 224 ನೇ ರ್ಯಾಂಕ್ ನಲ್ಲಿ ತೇರ್ಗಡೆಯಾಗಿದ್ದರು. ಖಡಕ್ ಪೊಲೀಸ್ ಅಧಿಕಾರಿ ಎಂಬ ಖ್ಯಾತಿ ಹೊಂದಿರುವ ಇವರು, ಅತ್ಯಂತ ಯಂಗ್ ಅಧಿಕಾರಿ ಕೂಡಾ ಹೌದು.


