Select Page

Advertisement

ಕಾಯಕದ ಜೊತೆ ಬೆಳಗಾವಿ‌ ಜಿಲ್ಲಾಧಿಕಾರಿ ಪುಸ್ತಕ ಪ್ರೇಮ

ಕಾಯಕದ ಜೊತೆ ಬೆಳಗಾವಿ‌ ಜಿಲ್ಲಾಧಿಕಾರಿ ಪುಸ್ತಕ ಪ್ರೇಮ

ಬೆಳಗಾವಿ : ಜಿಲ್ಲಾಧಿಕಾರಿ ಎಂದರೆ ಸಾಕು ದಿನನಿತ್ಯ ಸಾಕಷ್ಟು ಕೆಲಸ ಕಾರ್ಯಗಳು. ಕಚೇರಿಗೆ ಬಂದು ಜನಸಾಮಾನ್ಯರ ಕಷ್ಟ ಆಲಿಸುವ ಕೆಲಸದಲ್ಲೇ ಸಮಯ ಕಳೆಯುವುದು ಸಾಮಾನ್ಯ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಂಥಾಲಯ ನಿರ್ಮಿಸಿ ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸಿರುವ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರ ಒಂದು ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತವಾಗಿದೆ‌.

ಹೌದು ಹದಿನೆಂಟು ವಿಧಾನಸಭಾ ಕ್ಷೇತ್ರ ಹೊಂದಿರುವ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಗೆ ದಿನನಿತ್ಯದ ಸಾವಿರಾರು ಜನ ತಮ್ಮ ಸಮಸ್ಯೆ ಪರಿಹಾರಕ್ಕೆ ಆಗಮಿಸುತ್ತಾರೆ. ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ವಾಪಸ್ ತೆರಳುವಲ್ಲಿ ಸಮಯಾವಕಾಶವೂ ಬೇಕು. ಈ ಸಂದರ್ಭದಲ್ಲಿ ಖಾಲಿ ಕುಳಿತು ಸಮಯ ವ್ಯರ್ಥ ಮಾಡುವ ಬದಲಿಗೆ, ಇಲ್ಲೇ ಇರುವ ಪುಟ್ಟ ಗ್ರಂಥಾಲಯದಲ್ಲಿ ತಮ್ಮ ಇಷ್ಟದ ಪುಸ್ತಕ ಓದುವ ಮೂಲಕ ಮನಸ್ಸಿಗೆ ನೆಮ್ಮದಿ ಪಡೆಯುವ ಸದಾವಕಾಶವನ್ನು ಜಿಲ್ಲಾಧಿಕಾರಿಗಳು ಕಲ್ಪಿಸಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ನಿತೇಶ್ ಪಾಟೀಲ್ ಅವರ ಆಸಕ್ತಿಯಿಂದ ಪುಟ್ಟ ಗ್ರಂಥಾಲಯ ಒಂದನ್ನು ನಿರ್ಮಾಣ ಮಾಡಲಾಗಿದೆ. ಕಚೇರಿಗೆ ಬರುವ ಸಾವಿರಾರು ಜನ ಪುಸ್ತಕಗಳನ್ನು ತಗೆದುಕೊಂಡು ಓದುವ ಸೌಲಭ್ಯ ಕಲ್ಪಿಸಲಾಗಿದೆ. ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸೇರಿದಂತೆ ಅನೇಕ ಪುಸ್ತಕಗಳನ್ನು ಇಲ್ಲಿ ಇಡಲಾಗಿದ್ದು, ದಿನನಿತ್ಯ ಬರುವ ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದಾಗಿದೆ.

ಜಿಲ್ಲೆಯ ದರ್ಶನ ಮಾಡಿಸುವ ಡಿಜಿಟಲ್ ಫೋಟೋಗಳು : ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳ ತವರೂರಾದ ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ‌. ಬೆಳಗಾವಿ ಮುಕುಟದಂತಿರುವ ಸುವರ್ಣ ವಿಧಾನಸೌಧ, ಗೋಕಾಕ್ ಜಲಪಾತ, ನಗರದ ಕೋಟೆ ಕೆರೆ, ಸವದತ್ತಿ ಯಲ್ಲಮ್ಮ ದೇವಸ್ಥಾನ.

ರಾಣಿ ಚನ್ನಮ್ಮ ಮೃಗಾಲಯದ ಸಂಗ್ರಹದ ಚಿತ್ರಗಳನ್ನು ಒಳಗೊಂಡ ಡಿಜಿಟಲ್ ಪೋಟೋಗಳನ್ನು ಗ್ರಂಥಾಲಯದಲ್ಲಿ ವೀಕ್ಷಣೆ ಮಾಡಬಹುದಾಗಿದೆ‌. ಹಾಗೆಯೇ ಬೆಳಗಾವಿ ಜಿಲ್ಲೆಯ ವಿಶಿಷ್ಟ ತಿಂಡಿ ತಿನಿಸುಗಳು, ಉತ್ಕೃಷ್ಟ ಬೆಳೆಗಳು ಹಾಗೂ ಪ್ರಕೃತಿ ಸಂದರ್ಯ ತಾಣಗಳನ್ನು ಪರಿಚಯಿಸುವ ಪೋಟೋಗಳು ಇಲ್ಲಿ ಲಭ್ಯ ಇವೆ. 

ಉಡುಗೊರೆಯಾಗಿ ಪುಸ್ತಕ ಕೊಡಿ ಎಂದ ಜಿಲ್ಲಾಧಿಕಾರಿ : ಸಾಮಾನ್ಯವಾಗಿ ಜಿಲ್ಲಾಧಿಕಾರಿಗಳನ್ನು ಭೇಡಿ ಮಾಡಲು ಜಿಲ್ಲೆಯ ಸಚಿವರು, ಶಾಸಕರು ಸೇರಿದಂತೆ ಜನಸಾಮಾನ್ಯರು ಆಗಮಿಸುವ ಸಂದರ್ಭದಲ್ಲಿ ಸೌಹಾರ್ದಯುತವಾಗಿ ಹೂಗುಚ್ಛ ತರುವುದು ವಾಡಿಕೆ.

ಆದರೆ ಜಿಲ್ಲಾಧಿಕಾರಿಗಳು ತಮ್ಮ ಭೇಟಿಗೆ ಬರುವವರು ಹೂಗೂಚ್ಛ, ಶಾಲು ಬದಲಿಗೆ ಪುಸ್ತಕ ತರಲು ಮನವಿ ಮಾಡಿದ್ದಾರೆ. ಇದರಿಂದ ಕಚೇರಿಯಲ್ಲಿನ ಗ್ರಂಥಾಲಯದಲ್ಲಿ ಪುಸ್ತಕಗಳ ಸಂಗ್ರಹ ಹೆಚ್ಚಾಗುತ್ತದೆ ಹಾಗೂ ಜನರಿಗೆ ಪುಸ್ತಕದ ಕುರಿತು ಒಲವು ಹೆಚ್ಚಿಸುತ್ತದೆ ಎಂಬುದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರ ವಾದ. 

ಗ್ರಾಮೀಣ ಭಾಗದಿಂದ ದಿನನಿತ್ಯ ನೂರಾರು ಜನ ಕಚೇರಿಗೆ ಆಗಮಿಸುತ್ತಾರೆ. ಅವರಿಗೆ ಉತ್ತಮ ಆಸನದ ವ್ಯವಸ್ಥೆ ಕಲ್ಪಿಸುವುದರ ಜೊತೆ ಗ್ರಂಥಾಲಯದ ವ್ಯವಸ್ಥೆ ಕೂಡಾ ಮಾಲಾಗಿದೆ. ಇದರಿಂದ ಜನರಲ್ಲಿ ಪುಸ್ತಕದ ಕುರಿತು ಒಲವು ಮೂಡುತ್ತದೆ. ಕಳೆದ ಒಂದು ವರ್ಷದಿಂದ ಉಡುಗೊರೆಯಾಗಿ ಬಂದ ಎಲ್ಲಾ ಪುಸ್ತಕಗಳನ್ನು ಇಲ್ಲಿ‌ ಇಡಲಾಗಿದೆ. 

ನಿತೇಶ್ ಪಾಟೀಲ್  ಬೆಳಗಾವಿ ಜಿಲ್ಲಾಧಿಕಾರಿ

Advertisement

Leave a reply

Your email address will not be published. Required fields are marked *

error: Content is protected !!