ಅತ್ತೆಯ ಕೈ ಕತ್ತರಿಸಿದ ಸೊಸೆ ; ಏನಾಗ್ತಿದೆ ಬೆಳಗಾವಿಯಲ್ಲಿ
ಬೆಳಗಾವಿ : ಜಿಲ್ಲೆಯಲ್ಲಿ ದಿನಗಳೆದಂತೆ ಅಪರಾಧ ಕೃತ್ಯಗಳ ಸಂಖ್ಯೆ ಏರುತ್ತಾ ಸಾಗಿವೆ. ವೈಯಕ್ತಿಕ ದ್ವೇಷಗಳು ಸ್ಪೋಟಗೊಳ್ಳುತ್ತಿದ್ದು, ಅಪರಾಧ ಕೃತ್ಯಗಳ ಸಂಖ್ಯೆ ಲೆಕ್ಕ ತಪ್ಪಿದೆ.
ಗುರುವಾರ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಅತ್ತೆಯ ಕೈ ಕಡಿದು ಸೊಸೆ ಹಲ್ಲೆ ಮಾಡಿದ್ದಾಳೆ. ಸಧ್ಯ ಅತ್ತೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಜಾನವ್ವ ಹುದಲಿ ( 80 ) ಇವರ ಮೇಲೆ ಸೊಸೆ ಶಿಲ್ಪಾ ಹಲ್ಲೆ ಮಾಡಿದ್ದಾಳೆ. ನಿನ್ನೆಯಷ್ಟೇ ಸೊಸೆ ಶಿಲ್ಪಾ ಗಂಡನ ಜೊತೆ ಜಗಳ ಮಾಡಿದ್ದಳು. ಇದಾದ ನಂತರ ತಾಯಿ ಮನೆಗೆ ಊಟಕ್ಕೆ ಹೋಗಿದ್ದ, ಇಷ್ಟಕ್ಕೆ ಕೋಪಗೊಂಡ ಸೊಸೆ ಕುಡಗೋಲಿನಿಂದ ಹಲ್ಲೆ ಮಾಡಿದ್ದಾಳೆ ಎಂದು ಅತ್ತೆ ಆರೋಪಿಸಿದ್ದಾಳೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆರೋಪಿ ಮಹಿಳೆ ಶಿಲ್ಪಾ. ನಾನು ಕೆಲಸಕ್ಕೆ ಹೋಗಿದ್ದೇ, ಇವರೆ ಕೈಗೆ ಗಾಯ ಮಾಡಿಕೊಂಡು ನಾಟಕ ಮಾಡಿ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

