BREAKING – ಕೊಲೆಯಾದರಾ ರುದ್ರಣ್ಣ ; ಆತ್ಮಹತ್ಯೆ ಎಂದು ಬಿಂಬಿಸಲು ನಡೆದಿತ್ತಾ ಒಳಸಂಚು…?
ಬೆಳಗಾವಿ : ತಹಶಿಲ್ದಾರ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಸ್ ಡಿಎ ನೌಕರ ರುದ್ರೇಶ್ ಯರಗಣ್ಣವರ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು ಖಡೇಬಜಾರ್ ಡಿಎಸ್ಪಿಗೆ ಅನಾಮಧೇಯ ಪತ್ರ ಬಂದಿದ್ದು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಬರೆದಿದ್ದಾರೆ.
ರುದ್ರೇಶ್ ಯಡವಣ್ಣವರ ಕೊಲೆಗೆ ತಹಶಿಲ್ದಾರ ಜೀಪ್ ಡ್ರೈವರ್ ಇವನೇ ಮೂಲ ಕಾರಣ. ಪೊಲೀಸರು ತಹಶಿಲ್ದಾರ ವಿಚಾರಣೆ ಮಾಡಿದರೆ ಎಲ್ಲ ಸತ್ಯ ಬಹಿರಂಗವಾಗುತ್ತದೆ ಎಂದು ಪೊಲೀಸ್ ಕಮಿಷ್ನರ್, ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು, ರಾಜ್ಯಪಾಲರು, ಎಸಿ, ಮಾನವಹಕ್ಕುಗಳ ಆಯೋಗಕ್ಕೆ ಅನಾಮಧೇಯ ಪತ್ರ ಬರೆದಿದ್ದಾರೆ.
ರುದ್ರೇಶ್ ತಾಯಿ ಮಲ್ಲವ್ವ ಯಡವಣ್ಣವರ ಮಾತನಾಡಿ, ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂಥ ಹೇಡಿಯಲ್ಲ. ಅವನಿಗೆ ಕೊಲೆ ಮಾಡಿದ್ದಾರೆ. ಪೊಲೀಸರು ಸರಿಯಾಗಿ ಮಾಹಿತಿ ನಮಗೆ ನೀಡುತ್ತಿಲ್ಲ. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಬೇಕು ಎಂದರು.
ನನ್ನ ಮಗನ ಕೊಲೆ ಮಾಡಿದ ಆರೋಪಿಗಳು ಜಾಮೀನು ಪಡೆದು ರಾಜಾರೋಷವಾಗಿ ಕೆಲಸಕ್ಕೆ ಬಂದಿದ್ದಾರೆ. ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಪೊಲೀಸರು ಸರಿಯಾಗಿ ತನಿಖೆ ನಡೆಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.