Video – ನಗರ ಪೊಲೀಸರ ಗುಂಡಾವರ್ತನೆ : ಇದು ಬಿಹಾರ ರಾಜ್ಯವೋ, ಕರ್ನಾಟಕವೋ ?
ಬೆಳಗಾವಿ : ಮದ್ಯ ರಾತ್ರಿ ನಡು ರಸ್ತೆಯಲ್ಲಿಯೇ ಉದ್ಯಮಬಾಗ ಪೊಲೀಸರು ವ್ಯಕ್ತಿಯೊರ್ವನನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಸ್ತೆಯ ಮದ್ಯ ಬೇಕಾಬಿಟ್ಟಿಯಾಗಿ, ಮನಸೋ ಇಚ್ಚೆ ಪೊಲೀಸರು ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದು ಉದ್ಯಮಬಾಗ ಪೊಲೀಸರು ಥಳಿಸಿದ ವಿಡಿಯೋ ಎಂದು ಹೇಳಲಾಗುತ್ತಿದೆ.
ಪೊಲೀಸರು ಇಷ್ಟೊಂದು ಅಮಾನಷ್ಯವಾಗಿ ವ್ಯಕ್ತಿಯನ್ನು ಹೊಡೆಯುತ್ತಿರುವುದಾದರೂ ಏತಕ್ಕೆ ಎನ್ನುವ ಮಾಹಿತಿ ಇಲ್ಲಿಯವರೆಗೂ ತಿಳಿದು ಬಂದಿಲ್ಲ. ಇನ್ನೂ ಈ ಕುರಿತು ನಗರ ಪೊಲೀಸ್ ಇಲಾಖೆಯಿಂದಲೂ ಯಾವುದೇ ಪ್ರತಿಕ್ರಿಯೆ ಬಾರದೆ ಇರುವುದು ನಾನಾ ಅನುಮಾನಕ್ಕೆ ಕಾರಣವಾಗಿದೆ.
ವ್ಯಕ್ತಿ ತಪ್ಪು ಮಾಡಿದ್ದರೆ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ತಮ್ಮದೆಯಾದ ಶೈಲಿಯಲ್ಲಿ ಗ್ರೀಲ್ ಹೊಡೆಯಬೇಕು. ಅದನ್ನು ಬಿಟ್ಟು ವೈಯಕ್ತಿಕ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯ ಮೇಲೆ ಮನಸೋ ಇಚ್ಚೆ ಥಳಿಸಿದ್ದ ವಿಡಿಯೋದಲ್ಲಿರುವ ಮೂವರು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಸೋಶಿಯಲ್ ಮಿಡಿಯಾದಲ್ಲಿ ಒತ್ತಾಯಿಸುತ್ತಿದ್ದಾರೆ.

