ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಶಿಶುಪಾಲನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಗೌರವಧನ ಆಧಾರದ ಮೇಲೆ ಶಿಶುಪಾಲನಾ ಶಿಕ್ಷಕಿ 1, ಶಿಶುಪಾಲನಾ ಸಹಾಯಕಿ 2, ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಅರ್ಹತೆ : ಶಿಶುಪಾಲನಾ ಶಿಕ್ಷಕಿಯ ವಿದ್ಯಾರ್ಹತೆ ಕನಿಷ್ಠ 10ನೇ ತರಗತಿ ಹಾಗೂ ಸಹಾಯಕಿಯ ವಿದ್ಯಾರ್ಹತೆ ಕನಿಷ್ಠ 07ನೇ ತರಗತಿ ಹೊಂದಿರತಕ್ಕದ್ದು. ಶಿಶುಪಾಲನಾ ಶಿಕ್ಷಕಿಯ ಹುದ್ದೆಗೆ ಶಾಲಾ ಪೂರ್ವ ಶಿಕ್ಷಣ ತರಬೇತಿಯನ್ನು ಪಡೆದಿರಬೇಕು, ಶಿಶುಪಾಲನಾ ಶಿಕ್ಷಕಿ ಹಾಗೂ ಸಹಾಯಕಿಯರ ಹುದ್ದೆಗಳಿಗೆ ವಯೋಮಿತಿ 20-40 ವರ್ಷದೊಳಗಿರಬೇಕು, ಶಿಶುಪಾಲನಾ ಶಿಕ್ಷಕಿ ಹಾಗೂ ಸಹಾಯಕಿಯರು ಶಿಶುಪಾಲನಾ ಕೇಂದ್ರದ ಹತ್ತಿರದಲ್ಲಿ ವಾಸವಾಗಿರಬೇಕು.
ಪ್ರಕಟಣೆಯ ದಿನದಿಂದ 15 ದಿನಗಳೊಳಗಾಗಿ ಶಿಶುಪಾಲನಾ ಶಿಕ್ಷಕಿ ಹಾಗೂ ಸಹಾಯಕಿಯರ ಹುದ್ದೆಗೆ ಆಯ್ಕೆಯಾಗಲು ಇಚ್ಚಿಸುವ ಅಭ್ಯರ್ಥಿಗಳು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಇವರಿಗೆ ಎಲ್ಲ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಮಟ್ಟದ ಶಿಶುಪಾಲನಾ ಕೇಂದ್ರಕ್ಕೆ ಸಿಬ್ಬಂದಿ ನೇಮಕಾತಿ: ಅರ್ಜಿ ಆಹ್ವಾನ



