ರಾಯಬಾಗ : ಭೀಕರ ರಸ್ತೆ ಅಪಘಾತ ಮೂವರು ಸಾವು
ರಾಯಬಾಗ : ಬೈಕ್ ಹಾಗೂ ಗೂಡ್ಸ್ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತು ವರ್ಷದ ಮಗು ಸೇರಿ ಮೂವರು ಮೃತಪಟ್ಟ ದಾರುಣ ಘಟನೆ ಬುಧವಾರ ಬೆಳಿಗ್ಗೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಲಖನೂರು ಅಗಸಿ ಬಳಿ ಸಂಭವಿಸಿದೆ.
ಗಿರೀಶ ಕುಂದ್ರಾಳ (33), ಮಂಜುಳಾ ಕುಂದ್ರಾಳ (30) ಹಾಗೂ ಆರಾಧ್ಯ ಕುಂದ್ರಾಳ (09) ಮೃತ ದುರ್ದೈವಿಗಳು. ಜಮಖಂಡಿ ಮೂಲದ ಮೂವರು ದ್ವಿಚಕ್ರ ವಾಹನದ ಮೇಲೆ ಕುಡಚಿ ಮಾರ್ಗವಾಗಿ ಬಾಗಲಕೋಟೆ ಕಡೆ ತೆರಳುವ ಸಂದರ್ಭದಲ್ಲಿ ವೇಗವಾಗಿ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ.
ಭೀಕರ ಅಪಘಾತದಲ್ಲಿ ಮಂಜುಳಾ ಹಾಗೂ ಆರಾಧ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ನನ್ನು ಸಮೀಪದ ಹಾರೂಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


