ಗ್ಯಾಂಗ್ ರೇಪ್ ಪ್ರಕರಣ ; ಪೋಲಿಸಪ್ಪನ ಮಗ ಸೇರಿ ನಾಲ್ವರಿಗೆ 20 ವರ್ಷ ಕಾರಾಗೃಹ ಶಿಕ್ಷೆ

ಬೆಳಗಾವಿ : ಕಳೆದ ವರ್ಷದ ಮೇ ನಲ್ಲಿ ನಗರದ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗ್ಯಾಂಗ್ ರೇಪ್ ಪ್ರಕರಣದ ತೀರ್ಪು ಇಂದು ಹೊರಬಿದ್ದಿದ್ದು, ಪೊಲೀಸಪ್ಪನ ಮಗ ಸೇರಿ ನಾಲ್ವರು ಅತ್ಯಾಚಾರಿಗಳಿಗೆ 20 ವರ್ಷ ಕಾರಾಗೃಹ ಕಠಿಣ ಶಿಕ್ಷೆಯನ್ನು ಬೆಳಗಾವಿ ಜಿಲ್ಲಾ ಪೋಕ್ಸೊ ನ್ಯಾಯಾಲಯ ಪ್ರಕಟಿಸಿದೆ.
ಬಾಲಕಿಯೊಬ್ಬಳನ್ನು ಬೆಳಗಾವಿ ನಗರದಿಂದ ಪುಸಲಾಯಿಸಿ, ನಗರ ಹೊರವಲಯದ ಫಾರ್ಮಹೌಸವೊಂದರಲ್ಲಿ ಗ್ಯಾಂಗ್ ರೇಪ್ ನಡೆಸಲಾದ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಮಗ ಸೇರಿ ನಾಲ್ವರು ಅತ್ಯಾಚಾರ ನಡೆಸಿದ್ದರು. ಇದರಲ್ಲಿ ಫಾರ್ಮಹೌಸ್ ಮಾಲೀಕರು ಇಬ್ಬರಿದ್ದಾರೆ. ಅವರಿಗೆ ಶಿಕ್ಷೆ ಪ್ರಕಟಿಸುವುದು ಬಾಕಿ ಇದೆ.
ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಒಟ್ಟು 6ಜನರನ್ನು ಮಾರ್ಕೇಟ್ ಪೊಲೀಸರು ಬಂಧಿಸಿದ್ದರು. ಬಾಲಕಿಯನ್ನು ಮೂರು ಜನ ಅಪಹರಿಸಿಕೊಂಡು ಹೋಗಿ ಈ ಕುಕೃತ್ಯ ನಡೆಸಿದ್ದರು.
ಪ್ರಕರಣದಲ್ಲಿ ಫಾರ್ಮ್ ಹೌಸ್ ಮಾಲೀಕ ಸೇರಿ ಬಂಧಿಸಲಾದ ಓಟ್ಟು 6 ಜನರಲ್ಲಿ ಇಬ್ಬರು ಅಪ್ರಾಪ್ತ ಬಾಲಕರಾಗಿದ್ದರು. ನಾಲ್ಕು ಜನರ ವಿರುದ್ದ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.
ಮಾರ್ಕೇಟ್ ಠಾಣೆ ಅಂದಿನ ಇನ್ಸಪೆಕ್ಟರ್ ಧಾಮಣ್ಣವರ ತನಿಖೆ ನಡೆಸಿ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪೊಲೀಸ್ ಇನ್ಸಪೆಕ್ಟರ್ ಒಬ್ಬರ ಪುತ್ರ ಸಹ ಈ ಅತ್ಯಾಚಾರ ಕೃತ್ಯದಲ್ಲಿ ಭಾಗಿಯಾಗಿರುವುದು ದುರಂತದ ಸಂಗತಿ.

