ಬೆಳಗಾವಿ ಪಾಲಿಕೆ ಚುನಾವಣೆ ; ನೂತನ ಮೇಯರ್ ಆಯ್ಕೆ
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಹುದ್ದೆಗೆ ಬಿಜೆಪಿಯ ಇಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ.
ಸವಿತಾ ಕಾಂಬಳೆ ಮೇಯರ್ ಆಗಿ ಆಯ್ಕೆಯಾದರೆ ಉಪ ಮೇಯರ್ ಸ್ಥಾನಕ್ಕೆ ಆನಂದ ಚೌಹಾನ್ ಆಯ್ಕೆಯಾಗಿದ್ದಾರೆ.
ಬೆಳಗಾವಿ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಬಹುಮತ ಪಡೆದ ಅಧಿಕಾರ ಹಿಡಿದಿತ್ತು.
ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಪಾಳೆಯ ಸಂತಸ ಹಂಚಿಕೊಂಡಿದೆ. ಶಾಸಕ ಅಭಯ್ ಪಾಟೀಲ್, ಸಂಸದೆ ಮಂಗಳಾ ಅಂಗಡಿ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ಅನಿಲ್ ಬೆನಕೆ ಸೇರಿದಂತೆ ಪಕ್ಷದ ಸದಸ್ಯರು ಶುಭಾಶಯ ತಿಳಿಸಿದ್ದಾರೆ.


