ಹೆಣ್ಣು ಹುಟ್ಟಿದ್ದಕ್ಕೆ ಹಸುಳೆಯನ್ನೇ ಕೊಂದ ತಾಯಿ ; ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆ

ಬೆಳಗಾವಿ : ಹೆಣ್ಣು ಮಗು ಜನಿಸಿತ್ತು ಎಂಬ ಕಾರಣಕ್ಕೆ ಬೆಳಗಾವಿಯಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದ್ದು, ಮೂರು ದಿನ ಕಂದಮ್ಮನನ್ನು ಕತ್ತು ಹಿಸುಕಿ ಕ್ರೂರಿ ತಾಯಿ ಕೊಂದ ಘಟನೆ ರಾಮದುರ್ಗ ತಾಲೂಕಿನ ಹಿರೇಮಲಂಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ತಾಯಿ ಅಶ್ವಿನಿ ಹಳಕಟ್ಟಿ(28) ಹಸುಗೂಸು ಕೊಂದ ಪಾಪಿ. ಈ ಹಿಂದೆ ಮೂರು ಹೆಣ್ಣು ಮಗ ಹುಟ್ಟಿ ಗಂಡು ಮಗು ನಿರೀಕ್ಷೆಯಲ್ಲಿದ್ದ ಅಶ್ವಿನಿ. ನ. 23ರಂದು ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾಗಿತ್ತು. ಮಾರನೇ ದಿನ ತಾಯಿ ಮನೆ ಹಿರೇಮುಲಂಗಿಗೆ ಬಂದಿದ್ದ ಅಶ್ವಿನಿ. ಇಂದು ಬೆಳಗ್ಗೆ ತಾಯಿ ಹೊರ ಹೋದಾಗ ಮಗಳ ಕತ್ತು ಹಿಸುಕಿ ಕೊಂದು ಡ್ರಾಮಾ ಮಾಡಿದ್ದಾಳೆ.
ಮಗಳು ಉಸಿರಾಡುತ್ತಿಲ್ಲ ಎಂದು ಡ್ರಾಮಾ ಮಾಡಿದ ತಾಯಿ ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ಮಗು ತೆಗೆದುಕೊಂಡು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕತ್ತು ಹಿಸುಕಿ ಉಸಿರು ಗಟ್ಟಿ ಮಗು ಸಾವಾಗಿದೆ ಎಂದ ವೈದ್ಯರು ವರದಿ ನೀಡಿದ್ದಾರೆ.
ತಾಯಿ ವಿರುದ್ಧ ಕೊಲೆ ಕೇಸ್ ದಾಖಲಿಸಿಕೊಳ್ಳುತ್ತಿರುವ ಪೊಲೀಸರು. ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರೇಬಾನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.


