ರಾಯಬಾಗ – ಲವರ್ ಜೊತೆ ಯುವತಿ ಪರಾರಿ ; ಮಗಳ ತಿಥಿ ಮಾಡಿ ಊರಿಗೆ ಊಟ ಹಾಕಿದ ತಂದೆ..!
ಚಿಕ್ಕೋಡಿ : ಹೆತ್ತ ಮಗಳು ಪ್ರೀತಿಯ ಬಲೆಯಲ್ಲಿ ಬಿದ್ದು ಬೇರೊಬ್ಬನ ಜೊತೆ ಓಡಿ ಹೋದ ಕಾರಣಕ್ಕೆ ಮನನೊಂದ ತಂದೆ ತಿಥಿ ಕಾರ್ಯ ಮಾಡಿ ಊರಿಗೆ ಊಟ ಹಾಕಿಸಿದ ಘಟನೆ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.
ಸುಶ್ಮಿತಾ ಶಿವಗೌಡ ಪಾಟೀಲ ಎಂಬ ಯುವತಿ ಅದೇ ಗ್ರಾಮದ ವಿಠ್ಠಲ ಬಸ್ತವಾಡೆ ಎಂಬುವವನ ಜೊತೆ ಪರಾರಿಯಾಗಿದ್ದಳು.
ಮಗಳ ನಡೆಯಿಂದ ಮನೆತನದ ಗೌರವ ಹಾಳಾಯಿತು ಎಂಬ ನೋವಿನಿಂದ ತಂದೆ ಶಿವನಗೌಡ ಪಾಟೀಲ ಮಗಳ ತಿಥಿ ಕಾರ್ಯ ಮಾಡಿದ್ದಾನೆ.
ಸಂಬಂಧಿಕರನ್ನು ಕರೆದು ಮಗಳ ತಿಥಿ ಕಾರ್ಯ ಮಾಡಿದ್ದಲ್ಲದೆ ಊರಿನ ಕೆಲವೆಡೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬ್ಯಾನರ್ ಹಾಕಿದ್ದಾನೆ. ಜೊತೆಗೆ ಊರಿಗೆ ಊಟ ಹಾಕಿಸಿ ಮಗಳ ವಿರುದ್ಧ ಸಿಟ್ಟು ಪ್ರದರ್ಶಿಸಿದ್ದಾನೆ. ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

