ಭಾರತೀಯ ಸೇನೆಗೆ ಆಯ್ಕೆಯಾದ ಒಡಹುಟ್ಟಿದವರು..!
ಬೆಳಗಾವಿ : ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ಹರಕೆ ಮನೆತನದ ಸಹೋದರರು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.
ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ಸಿದ್ದಪ್ಪ ಕೆಂಚಪ್ಪ ಹರಕೆ ಹಾಗೂ ಮಹಾಂತೇಶ ಕೆಂಚಪ್ಪಾ ಹರಕೆ ಸಹೋದರರು
ಭಾರತೀಯ ಸೇನೆಯ ಅಗ್ನಿಪಥ ಯೋಜನೆ ಭಾಗವಾದ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ.
ಯುವಕರ ಸಾಧನೆಗೆ ಗ್ರಾಮದ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನೂ ಆಯ್ಕೆಯಾದವರಿಗೆ ಸನ್ಮಾನಿಸಲಾಗಿದೆ.


