ಇಟ್ಕೊಂಡವಳಿಗಾಗಿ ಕಟ್ಕೊಂಡ ಹೆಂಡತಿಯನ್ನೇ ಹೊಡೆದ ಪಾಪಿ ಗಂಡ

ಚಿಕ್ಕೋಡಿ : ಗಂಡನ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಹೆಂಡತಿ ಹಾಗೂ ಆಕೆಯ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಬೆಂಬಲವಾಡದಲ್ಲಿ ಗುರುವಾರ ನಡೆದಿದೆ.
ಕಟ್ಟಿಕೊಂಡ ಗಂಡ ರಾಕೇಶ್ ಹೊಸಮನಿ ಪರ ಸ್ತ್ರೀಯೊಂದಿಗೆ ಲವ್ವಿ ಡವ್ವಿ ನಡೆಸುತ್ತಿದ್ದನ್ನು ಪ್ರಶ್ನಿಸಿದ್ದ ಹೆಂಡತಿ ರಾಜಶ್ರೀ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಂಡನ ಅನೈತಿಕ ಸಂಬಂಧದ ಪ್ರಶ್ನೆ ಮಾಡಿದ್ದ ಹೆಂಡತಿಯ ಮೇಲೆ ಕೊಪಗೊಂಡು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ತವರು ಮನೆಗೆ ಹೋಗಿದ್ದ ಹೆಂಡತಿಗೆ ದೀಪಾವಳಿ ಹಬ್ಬಕ್ಕೆ ಮನೆಗೆ ಬರುವಂತೆ ತಿಳಿಸಿ ಆಕೆಯ ಮೇಲೆ ಗಂಡ ರಾಕೇಶ್ ಹಾಗೂ ಅವನ ಕುಟುಂಬಸ್ಥರು ಭೀಕರ ಹಲ್ಲೆ ಮಾಡಿದ್ದಾರೆ.
ರಾಕೇಶ್ ಹಾಗೂ ರಾಜಶ್ರೀ ನಡುವೆ ಗಂಡನ ಅನೈತಿಕ ಸಂಬಂಧದ ಕುರಿತು ಆಗಾಗ ಮನೆಯಲ್ಲಿ ಜಗಳವಾಗುತ್ತಿತ್ತು. ಈ ಕುರಿತು ರಾಜಶ್ರೀ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಳು. ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆಸಿದ ಬಳಿಕ ಕಡಿಮೆಯಾಗಿದ್ದ ಜಗಳ ಮತ್ತೇ ಅದೇ ಚಾಳಿ ಮುಂದುವರೆಸಿದ್ದ ಗಂಡನ ಅನೈತಿಕ ಸಂಬಂಧ ಮತ್ತೇ ಪ್ರಶ್ನೆ ಮಾಡಿದ್ದ ರಾಜಶ್ರೀ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ತೀವ್ರವಾಗಿ ಗಾಯಗೊಂಡಿರುವ ರಾಜಶ್ರೀಯನ್ನು ಗೋಕಾಕ್ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಸಲಾಗಿದೆ.
ರಾಕೇಶ್ ತನ್ನ ಕುಟುಂಬಸ್ಥರ ಬೆಂಬಲದಿಂದ ಆತನ ಹೆಂಡತಿ ರಾಜಶ್ರೀ ಹಾಗೂ ಆಕೆಯ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಇಬ್ಬರೂ ಗೋಕಾಕ್ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ


