ಬೆಳಗಾವಿ : ಇಂಗಳಿ ಗ್ರಾಮದ ಗೋ ರಕ್ಷಕರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಹುಕ್ಕೇರಿ ಪೊಲೀಸ್ ಠಾಣೆ ಪಿಎಸ್ಐ ನನ್ನು ಅಮಾನತು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ.

ಪಿಎಸ್‌ಐ ನಿಖಿಲ್ ಕಾಂಬಳೆ ಅಮಾನತು ಆಗಿರುವ ಅಧಿಕಾರಿ. ಕಳೆದ ಜೂ. 26ರಂದು ಗೋವು ಸಾಗಿಸುತ್ತಿದ್ದ ವಾಹನ ಹಿಡಿದು ಠಾಣೆಗೆ ತಂದಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು. ಈ ವೇಳೆ ಕೇಸ್ ದಾಖಲಿಸದೇ ಬಿಟ್ಟು ಕಳ್ಸಿದ್ದ ಪಿಎಸ್‌ಐ ನಿಖಿಲ್ ಮೇಲಾಧಿಕಾರಿಗಳ‌ ಗಮನಕ್ಕೆ ತರದೇ ಬೇಜವಾಬ್ದಾರಿ ಮೆರೆದಿದ್ದರು.

ಗಡಿಪಾರಾದ ರೌಡಿ ಶೀಟರ್ ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ್ ಸೊಲ್ಲಾಪುರೆಯನ್ನ ಕೂಡ ಬಿಟ್ಟು ಕಳುಹಿಸಿದ್ದ ಪಿಎಸ್‌ಐ ನಿಖಿಲ್ ಎಲ್ಲ ಅಂಶಗಳನ್ನ ಪರಿಗಣಿಸಿ ಅಮಾನತು ಮಾಡಿ ಗುಳೇದ್ ಆದೇಶ ಹೊರಡಿಸಿದ್ದಾರೆ.

ಜುಲೈ 3ರಂದು ಇಂಗಳಿ ಚಲೋ ಕರೆ ಕೊಟ್ಟಿರುವ ಶ್ರೀರಾಮ ಸೇನೆ ಸಂಘಟನೆಯ ಹಿನ್ನೆಲೆಯಲ್ಲಿ ಪ್ರತಿಭಟನೆಗೂ ಮುನ್ನ ಪಿಎಸ್‌ಐ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.