Select Page

Advertisement

ಮುಧೋಳ ರನ್ನ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ; ಲೋಕಾಯುಕ್ತಕ್ಕೆ ದೂರು

ಮುಧೋಳ ರನ್ನ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ; ಲೋಕಾಯುಕ್ತಕ್ಕೆ ದೂರು



ಬೆಳಗಾವಿ : ಕೋಟ್ಯಾಂತರ ರೂ. ಸಾಲದ ಸುಣಲಿಯಲ್ಲಿರುವ ಮುಧೋಳ ರನ್ನ ಸಕ್ಕರೆ ಕಾರ್ಖಾನೆ ಟೆಂಡರ್ ರದ್ದುಪಡಿಸುವಂತೆ ಆಗ್ರಹಿಸಿ ಶೇರುದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಎಂದು ನ್ಯಾಯವಾದಿ ನವೀನ್ ಕಬ್ಬೂರ ಹೇಳಿದರು.

ಬೆಳಗಾವಿಯಲ್ಲಿ ನಡೆದ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು, ಮುಧೋಳ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿರುವ ರನ್ನ ಸಕ್ಕರೆ‌ ಕಾರ್ಖಾನೆ 471 ಕೋಟಿ ರೂ. ಸಾಲ ಹೊಂದಿದೆ. ಎಸ್, ಆರ್ ಪಾಟೀಲ್ ಒಡೆತನದ ಸಂಸ್ಥೆ ಸಾಲದ ಜವಾಬ್ದಾರಿ ಹೊತ್ತು ಸರಕಾರದಿಂದ ಟೆಂಡರ್ ಪಡೆದುಕೊಂಡಿದ್ದು ಸಾಲ ಮರುಪಾವತಿ ಸೇರಿದಂತೆ ರೈತರ ಬಾಕಿ ಕಬ್ಬಿನ ಬಿಲ್ ನೀಡಲು ಆಗದ ಪರಿಸ್ಥಿತಿ ಇದೆ ಎಂದರು.

470 ಕೋಟಿ ಸಾಲ ಹೊಂದಿರುವ ರನ್ನ ಸಕ್ಕರೆ ಕಾರ್ಖಾನೆಯನ್ನು ಎಸ್, ಆರ್ ಪಾಟೀಲ್ ಒಡೆತನದ ಸಂಸ್ಥೆ 30 ವರ್ಷಕ್ಕೆ ಲೀಸ್ ಪಡೆದಿದೆ. ಸಧ್ಯ 108 ಕೋಟಿ ರೂ. ಸರ್ಕಾರಕ್ಕೆ ಪಾವತಿ ಮಾಡಿದ್ದು ಬಳಿಕ‌ ಸಾಲದ ಜವಾಬ್ದಾರಿ ಹೊರಲು ಸಾಧ್ಯವಿಲ್ಲ ಎಂದು ಸಕ್ಕರೆ ನಿರ್ದೇಶನಾಲಯಕ್ಕೆ ಪತ್ರ ಬರೆದು ದರ ಸಂಧಾನ ಸಭೆಗೆ ಆಗ್ರಹಿಸಲಾಗಿದೆ. ಈ ಎಲ್ಲಾ ಬೆಳವಣಿಗೆಯಿಂದ ರೈತರಿಗೆ ಹಾಗೂ ಶೇರುದಾರರಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿದರು.

ಕಾರ್ಖಾನೆ ಮೇಲಿನ ಸಾಲ ಗಮನಿಸಿದರೆ ವರ್ಷಕ್ಕೆ ಸುಮಾರು 30 ಕೋಟಿ ಬಡ್ಡಿ ತುಂಬಬೇಕಾಗುತ್ತದೆ. ಆದರೆ ಕಾರ್ಖಾನೆಯವರು ಕೇವಲ 8 ಕೋಟಿ ಮಾತ್ರ. ಇದರಿಂದ ಕಾರ್ಖಾನೆ ಸಾಳದ ಸುಳಿಯಲ್ಲೇ ಉಳಿಯುತ್ತದೆ. ಈ ಎಲ್ಲಾ ಕಾರಣಗಳಿಂದ ಸಚಿವರಾದ ಆರ್ ಬಿ ತಿಮ್ಮಾಪುರ,‌ ಶಿವಾನಂದ ಪಾಟೀಲ್, ಬಿಳಗಿ ಶುರಗ್ಸ್, ಬಾಗಲಕೋಟ ಡಿಸಿ ಸೇರಿ 14 ಜನರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರೈತ ಸಿದ್ದಾರೂಢ ಕಂಬಳಿ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ನ್ಯಾಯವಾದಿ ಪ್ರಕಾಶ ಪಾಟೀಲ್, ರೈತ ಸಿದ್ದಾರೂಢ ಕಂಬಳಿ ಉಪಸ್ಥಿತರಿದ್ದರು.


Advertisement

Leave a reply

Your email address will not be published. Required fields are marked *

error: Content is protected !!