ಅಥಣಿ : ಕೋಳಿಗಳಿಗೆ ಹಾಕುವ ಆಹಾರ ಕದ್ದ ಖದೀಮರು
ಅಥಣಿ : ತಾಲೂಕಿನ ಯಲಿಹಡಲಗಿ ಗ್ರಾಮದಲ್ಲಿನ ಕೋಳಿ ಫಾರ್ಮ್ ಒಂದರಲ್ಲಿ ಇಡಲಾಗಿದ್ದ ಕೋಳಿಗೆ ಹಾಕುವ ಆಹಾರನ್ನು ಕದ್ದು ಖದೀಮರು ಪರಾರಿಯಾಗಿರುವ ಘಟನೆ ನಡೆದಿದೆ.
ತಾನಾಜಿ ಚೌಹಾನ್ ಎಂಬುವವರಿಗೆ ಸೇರಿದ್ದ ಕೋಳಿ ಫಾರ್ಮ್ ನಲ್ಲಿ ಸುಮಾರು 3,500 ಕೋಳಿ ಇದ್ದು ಅವುಗಳಿಗೆ ತಿನ್ನಲು ಹಾಕುವ ಆಹಾರದ ಬ್ಯಾಗ್ ಇಡಲಾಗಿತ್ತು.
ಭಾನುವಾರ ರಾತ್ರಿ ಖದೀಮರು ಫಾರ್ಮ್ ಬೇಲಿ ಹರಿದು 35 ಸಾವಿರ ಮೌಲ್ಯದ ಸುಮಾರು 15 ಕ್ಕೂ ಅಧಿಕ ಆಹಾರ ಬ್ಯಾಗ್ ಕಳವು ಮಾಡಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


