Select Page

Advertisement

ಬೆಳಗಾವಿ : ಗ್ರಾಮ ಪಂಚಾಯ್ತಿಗಳಿಗೆ ಎಚ್ಚರಿಕೆ ಗಂಟೆ ; ಅಧ್ಯಕ್ಷ ಸೇರಿ 28 ಜನ ಅಮಾನತು…! ಏನು ಕಾರಣ?

ಬೆಳಗಾವಿ : ಗ್ರಾಮ ಪಂಚಾಯ್ತಿಗಳಿಗೆ ಎಚ್ಚರಿಕೆ ಗಂಟೆ ; ಅಧ್ಯಕ್ಷ ಸೇರಿ 28 ಜನ ಅಮಾನತು…! ಏನು ಕಾರಣ?

ಬೆಳಗಾವಿ : ಅಕ್ರಮವಾಗಿ ಆಸ್ತಿ ನೋಂದಣಿ ಮಾಡಲು ಪ್ರತ್ಯಕ್ಷವಾಗಿ ಸಹಕಾರ ನೀಡಿದ್ದಲ್ಲದೆ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಒಟ್ಟುಗೂಡಿ ಸಭೆ ನಡೆಸಿ ನಿರ್ಧಾರ ಮಾಡಿರುವ ಆರೋಪದ ಮೇಲೆ ಗೋಕಾಕ್ ತಾಲೂಕಿನ ಗ್ರಾಮಪಂಚಾಯತಿಯೊಂದರ ಎಲ್ಲಾ ಸದಸ್ಯರು ಅನರ್ಹಗೊಂಡಿದ್ದಾರೆ.

ಹೌದು ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮ ಪಂಚಾಯತಿಯಲ್ಲಿ 2022 ರಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಸಮ್ಮುಖದಲ್ಲಿ ಗ್ರಾಮ ಸಭೆ ನಡೆದಿದೆ. ಈ ವೇಳೆ ಆಸ್ತಿ ಸಂಖ್ಯೆ 611 ಕ್ಕೆ ಸಂಬಂಧಿಸಿದಂತೆ ಖೊಟ್ಟಿ ದಾಖಲೆ ಪರಿಶೀಲನೆ ಮಾಡದೆ ಶಾಂತಾ ಪೋತದಾರ ಎಂಬುವವರ ಆಸ್ತಿಯನ್ನು ರಾಮಚಂದ್ರ ಪೋತದಾರ ಎಂಬಾತನ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ.



ಈ ಪ್ರಕರಣದಲ್ಲಿ ಪಿಡಿಒ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಅಕ್ರಮ ಬಯಲಾಗಿದೆ. ಈ ಹಿನ್ನಲೆಯಲ್ಲಿ ಅಧ್ಯಕ್ಷೆ ರೇಣುಕಾ ಪಾಟೀಲ, ಉಪಾಧ್ಯಕ್ಷೆ ಭೀಮವ್ವ ಯರನಾಳ, ಸೇರಿದಂತೆ 26 ಸದಸ್ಯರನ್ನು ಹುದ್ದೆಯಿಂದ ಮಾನತು ಮಾಡಿದ್ದಲ್ಲದೆ ಆರು ವರ್ಷ ಚುನಾವಣೆ ನಿಲ್ಲದಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಉಮಾ‌ ಮಹಾದೇವನ್ ಆದೇಶ ಹೊರಡಿಸಿದ್ದಾರೆ.



Advertisement

Leave a reply

Your email address will not be published. Required fields are marked *

error: Content is protected !!