ಪತ್ನಿಯ ಜೊತೆ ಖಾಸಗಿ ವೀಡಿಯೋ ಚಿತ್ರೀಕರಣ : ಬ್ಲ್ಯಾಕ್ ಮೇಲ್ ಮಾಡಿದ ಗಂಡ ಹಿಂಡಲಗಾ ಜೈಲಿಗೆ
ಬೆಳಗಾವಿ : ಪತ್ನಿಯ ಜೊತೆಗಿನ ಖಾಸಗಿ ವೀಡಿಯೋ ಇಟ್ಟುಕೊಂಡು ವಿಚ್ಛೇದನದ ನೀಡುವಂತೆ ಪೀಡಿಸುತ್ತಿದ್ದವನ್ನು ಪೊಲೀಸರು ಬಂಧಿಸಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಬೆಳಗಾವಿ ನಗರದ ನಿವಾಸಿ ಕಿರಣ್ ಪಾಟೀಲ್ ಎಂಬಾತ ತನ್ನ ಪತ್ನಿಯಿಂದ ವಿಚ್ಛೇದನದ ಬಯಸಿದ್ದೆ. ಇದಕ್ಕೆ ಮಹಿಳೆ ನುರಾಕರಿಸಿದ್ದಕ್ಕೆ ಆಕೆಯ ಜೊತೆಗಿನ ಖಾಸಗಿ ವೀಡಿಯೋ ಬಿಡುವುದಾಗಿ ಧಮ್ಕಿ ಹಾಕುವುದಲ್ಲದೆ ಮಾನಸಿಕ ಕಿರುಕುಳ ನೀಡುತ್ತದ. ಇದಕ್ಕೆ ಬೇಸತ್ತ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು.
ಜಿಲ್ಲಾ ಸೈಬರ್ ಠಾಣೆಯಲ್ಲಿ ಕೇಸ್ ದಾಖಲಿಸಿ ನ್ಯಾಯ ಕೊಡಿಸುವಂತೆ ಮಹಿಳೆ ಮನವಿ ಮಾಡಿದ್ದಳು. ಆರೋಪಿಯನ್ನು ಠಾಣೆಗೆ ಕರೆದು ವಿಚಾರಣೆ ಮಾಡುವ ಸಂದರ್ಭದಲ್ಲಿ ಆತನ ಮೋಬೈಲ್ ನಲ್ಲಿ ಪತ್ನಿಯೊಂದಿಗಿನ ಖಾಸಗಿ ವೀಡಿಯೋ ಇರುವುದಾಗಿ ತಿಳಿದು ಬಂದಿತ್ತು. ಈ ಸಂದರ್ಭದಲ್ಲಿ ಆರೋಪಿಯನ್ನು ಬಂಧಿಸಲು ಮುಂದಾಗಿದ್ದಕ್ಕೆ ಆತ ಪರಾರಿಯಾಗಿದ್ದ.
ಪರಾರಿಯಾದ ಆರೋಪಿ ಕಿರಣ್ ಪಾಟೀಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಸಂದರ್ಭದಲ್ಲಿ ಆರೋಪಿಯನ್ನ ಹಿಡಿದ ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸಧ್ಯ ಈತನನ್ನು ನಗರದ ಹಿಂಡಲಗಾ ಜೈಲಿಗೆ ಹಾಕಲಾಗಿದೆ. ಪತ್ನಿ ಜೊತೆಗೆ ವಿಚ್ಛೇದನ ಕೋರಿ ಕೋರ್ಟ್ ಗೆ ಹೋಗಿದ್ದ ಆರೋಪಿ ಮಹಿಳೆಗೆ ದಿನನಿತ್ಯ ಹಿಂಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.


