ಕೃಷ್ಣಾ ನದಿ ಪ್ರವಾಹದಲ್ಲಿ ತೇಲಿಬಂತು ಮೃತ ಗೋವು ; ಅಂತ್ಯಸಂಸ್ಕಾರ ಮಾಡಿದ ಗ್ರಾಮಸ್ಥರು
ಚಿಕ್ಕೋಡಿ : ದೂಧಗಂಗಾ ನದಿಯ ಪ್ರವಾಹದಲ್ಲಿ ತೇಲಿ ಬಂದ ಮೃತ ಆಕಳನನ್ನು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.
ದೂಧಗಂಗಾ ನದಿಯ ಪ್ರವಾಹದಲ್ಲಿ ಮೃತ ಆಕಳಯೊಂದು ತೇಲಿ ಬರುತ್ತಿದ್ದನ್ನು ಕಂಡು ಕರ್ಲಹೊಂಡಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿಯ ಸದಸ್ಯರು ಜೆಸಿಬಿ ಮೂಲಕ ಮೃತ ಆಕಳನನ್ನು ತಂದು ಕರ್ಲಹೊಂಡಲಿಂಗೇಶ್ವರ ದೇವಸ್ಥಾನ ಹಿಂಭಾಗದಲ್ಲಿ ಗುಂಡಿಯನ್ನು ಅಗೆದು ಹಿಂದೂ ಸಂಪ್ರದಾಯದಂತೆ ಮೃತ ಆಕಳಿನ ಅಂತ್ಯಕ್ರಿಯೆ ಮಾಡಿದರು.
ಗೋಮಾತೆಯ ಅಂತ್ಯಸಂಸ್ಕಾರ ಪೂಜ್ಯಭಾವನೆಯ ಪ್ರತೀಕವಾಗಿದೆ.ಗೋವುಗಳ ಪವಿತ್ರತೆಯನ್ನು ಅರಿತು ನದಿಯಲ್ಲಿ ತೇಲಿ ಬಂದ ಆಕಳಿನ ಶವವನ್ನು ಅಂತ್ಯಸಂಸ್ಕಾರ ಮಾಡಿರುವ ಕರ್ಲಹೊಂಡಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಸದಸ್ಯರ ಕಾರ್ಯ ಪ್ರಶಂಸನೀಯ.

