ಮಹಿಳೆಯ ಮಂಗಳಸೂತ್ರ ಕದ್ದು ಕೊಂದು ಹೋದ ಹಂತಕ
ಬೆಳಗಾವಿ : ಅಪಾರ್ಟ್‌ಮೆಂಟ್ ಗೆ ನುಗ್ಗಿ ಮಹಿಳೆ ಮಂಗಳಸೂತ್ರ ಕದ್ದು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಇಲ್ಲಿನ ಗಣೇಶಪುರದ ಲಕ್ಷ್ಮೀ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಲಕ್ಷ್ಮೀ ನಗರದ ನಿವಾಸಿ ಅಂಜನಾ ಅಜೀತ ದಡ್ಡೀಕರ್(49) ಕೊಲೆಯಾದ ದುರ್ದೈವಿ. ಅಪಾರ್ಟ್ಮೆಂಟ್ ನಲ್ಲಿ ಗಂಡ-ಹೆಂಡತಿ ಮಾತ್ರ ವಾಸ ಮಾಡುತ್ತಿದ್ದರು. ಆಟೋ ಚಾಲಕನಾಗಿದ್ದ ಮಾಡಿ ಜೀವನ ಸಾಗಿಸುತ್ತಿದ್ದ ಅಜೀತ್ ದಡ್ಡೀಕರ್ ನಿನ್ನೆ ಸಂಜೆ ಮನೆಗೆ ವಾಪಸ್ ಬಂದಾಗ ಕೊಲೆಯಾಗಿರೋ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಜ್ಞೆತಪ್ಪಿ ಬಿದ್ದಿದ್ದ ಅಂಜನಾರನ್ನ ಬೆಳಗಾವಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊರಳಲ್ಲಿದ್ದ ಮಂಗಳಸೂತ್ರ, ಕಿವಿಯೊಲೆ, ಕೈಯಲ್ಲಿ ಬಂಗಾರ ಉಂಗುರು ಕದ್ದು ಕೊಲೆ ಮಾಡಿರುವ ಶಂಕೆ ಮಾಡಿದ್ದಾರೆ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳಿಂದ ಪರಿಶೀಲನೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಕ್ರೈಮ್ ಡಿಸಿಪಿ ನಿರಂಜನರಾಜೆ ಅರಸ್,ಕ್ಯಾಂಪ್ ಪೊಲೀಸ ಠಾಣಾ ಸಿಪಿಐ ಆಲ್ತಾಫ್ ಮುಲ್ಲಾ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

