Select Page

Advertisement

ಕೆ ಎಚ್ ಬಿ ಕಾಲೋನಿಯಲ್ಲಿ ಹನುಮಾನ ಪ್ರತಿಮೆ ಪ್ರತಿಷ್ಟಾಪನೆ

ಕೆ ಎಚ್ ಬಿ ಕಾಲೋನಿಯಲ್ಲಿ ಹನುಮಾನ ಪ್ರತಿಮೆ ಪ್ರತಿಷ್ಟಾಪನೆ

ಬೆಳಗಾವಿ- ಬೆಳಗಾವಿ ಹೊರವಲಯದ ಬಸವನ ಕುಡುಚಿಯ ಕೆ ಎಚ್ ಕಾಲೋನಿಯಲ್ಲಿ ಇಂದು ಹನುಮಾನ್ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಗಣ‌ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳ ಈ ಸಂದರ್ಭದಲ್ಲಿ ನೆರವೇರಿಸಲಾಯಿತು.‌ ಸ್ಥಳೀಯ ಪಾಲಿಕೆ ಸದಸ್ಯ ಬಸವರಾಜ ಮೋದಗೇಕರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಳೆದ ಒಂದು ವರ್ಷದ ಹಿಂದೆ ಸ್ಥಳೀಯ ನಿವಾಸಿಗಳು ಬಡಾವಣೆಯಲ್ಲಿ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ರು. ದೇವಾಲಯ ಕಟ್ಟಡ ಪೂರ್ಣಗೊಂಡ ಬಳಿಕ ಇಂದು ಮೂರ್ತಿ ಪ್ರತಿಷ್ಟಾಪನೆ ನಡೆಸಲಾಯಿತು. ಇನ್ನೂ ಈ ವೇಳೆಯಲ್ಲಿ ಬಡಾವಣೆಯ ನೂರಾರು ಜನರಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು ‌.

ಈ ಸಂದರ್ಭದಲ್ಲಿ ರಾಜು ಗುರವ್, ವರ್ಧಮಾನ ಹುದ್ದಾರ, ಮಹಾಂತೇಶ್ ಬ ರಣಗಟ್ಟಿಮಠ, ಸುಭಾಷ್ ಮುಷ್ಟಗಿ, ದೀಪಕ್ ಪಾಟೀಲ, ಡಿ ಪಿ ಕೋಳಿ, ರವಿ ಪಾಚ್ಚಾಪುರ, ಅರ್ಜುನ್ ಹೂಗಾರ್ , ಸುರೇಶ ಭಜಂತ್ರಿ, ಅಶೋಕ ಬಡಿಗೇರ್, ಆರ್ ಜೀ ಪಾಟೀಲ್, ಬಸವರಾಜ ತುಳಸಿಗೇರಿ ಹಾಗೂ ಡಿ ಬಿ ಕಲಾರಕೊಪ್ಪ, ಎಂ ಬಿ ಪಟ್ಟಣಶೆಟ್ಟಿ, ದಯಾನಂದ ಚನ್ನಯಗೋಳ, ಎಂ ಬಿ ಮಡಿವಾಳರ್, ಎಸ್ ಎಸ್ ಕುಬಸರ್ ಸೇರಿ ಬಡಾವಣೆಯ ಸಮಸ್ತ ರಹವಾಸಿಗಳು ಇನ್ನಿತರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement

Leave a reply

Your email address will not be published. Required fields are marked *

error: Content is protected !!