Select Page

Advertisement

ಕಿತ್ತೂರು : ಭೀಕರ ರಸ್ತೆ ಅಪಘಾತ ; ಇಬ್ಬರು ಯುವಕರು ಸಾವು

ಕಿತ್ತೂರು : ಭೀಕರ ರಸ್ತೆ ಅಪಘಾತ ; ಇಬ್ಬರು ಯುವಕರು ಸಾವು

ಚನ್ನಮ್ಮನ ಕಿತ್ತೂರು : ಕಿತ್ತೂರಿನಿಂದ‌ ಹುಬ್ಬಳ್ಳಿಗೆ ಹೋಗುತ್ತಿರುವ ಬೈಕ್ ಸವಾರರಿಬ್ಬರು ರಾಷ್ಟ್ರೀಯ ಹೆದ್ದಾರಿ 48 ರ ಮೇಲೆ‌ ಹೋಗುತ್ತಿರುವಾಗ ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿ ಸವಾರರಿಬ್ಬರು ಮೃತ ಪಟ್ಟಿದ್ದಾರೆ.

ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನದ ಅಂಗವಾಗಿ ಖಾನಾಪುರ ತಾಲೂಕಿನ ನಂದಗಡ ಗ್ರಾಮಕ್ಕೆ ರಾಯಣ್ಣನ ಸಮಾಧಿ ದರ್ಶನ ಪಡೆಯಲು ಯುವಕರು ಸೇರಿಕೊಂಡು ಹೋಗಿದ್ದರು. ದರ್ಶನ ಮುಗಿಸಿ ಮರಳಿ ಹಳೆ ಹುಬ್ಬಳ್ಳಿಗೆ ಹೋಗುತ್ತಿರುವ ವೇಳೆ ಕಿತ್ತೂರು ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲೆ ಸವಾರನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿ ಮೃತ ಪಟ್ಟಿದ್ದಾರೆ.

ಹಳೆಯ ಹುಬ್ಬಳ್ಳಿ ಈಶ್ಚರ ನಗರದ ರಮೇಶ ಅಂದೆಪ್ಪ ಅಂಬಿಗೇರ (20), ಎಸ್. ಎಂ. ಕೃಷ್ಣ ನಗರದ ಮದನ್ ಚಂದ್ರಕಾಂತ ಮೇಟಿ (20) ಮೃತ ಪಟ್ಟ ಯುವಕರು ಎಂದು ಪೋಲಿಸ್ ರು ತಿಳಿಸಿದ್ದಾರೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಇಲ್ಲಿಯ ಸರ್ಕಾರಿ ಆರೋಗ್ಯ ಸಮುದಾಯ ಕೇಂದ್ರಕ್ಕೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್, ಬೈಲಹೊಂಗಲ ಡಿವೈಎಸ್ ಪಿ, ರವಿ ನಾಯ್ಕ, ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಪ್ರವೀಣ ಗಂಗೊಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಕಿತ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!