ಕಿರುಕುಳದಿಂದ ಬೇಸತ್ತು ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣು
ಬೆಳಗಾವಿ : ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ
ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆದಿದೆ.
ಸವಿತಾ ಮಾರುತಿ ಜೋಗಾನಿ (32) ಆತ್ಮಹತ್ಯೆಗೆ ಶರಣಾದ ಮಹಿಳೆ. ಕಳೆದ 2018 ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿಯೇ ಮಾರುತಿ – ಸುನಿತಾ ಮದುವೆ ಆಗಿದ್ದರು. ಮಾರುತಿ ಸರ್ಕಾರಿ ಶಾಲೆ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ.
ನಮ್ಮ ಮಗಳ ಸಾವಿಗೆ ರಾಕಸಕೊಪ್ಪ ಗ್ರಾಮದ ಮಾರುತಿ ಜೋಗಾನಿ ಕುಟುಂಬದವರು ಕಾರಣ ಎಂದು ಅವರ ವಿರುದ್ಧ ಸುನಿತಾ ಕುಟುಂಬಸ್ಥರ ಆರೋಪ ಮಾಡಿದ್ದಾರೆ.
ಮದುವೆ ನಂತರ ಪತಿ ಮಾರುತಿ, ಕುಟುಂಬಸ್ಥರ ನಿರಂತರ ಕಿರುಕುಳ ನೀಡುತ್ತಿದ್ದ ಎಂದು ಸವಿತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಸಂಬಂಧ ದೂರು ದಾಖಲಾಗಿದೆ.


