ಸಿ.ಟಿ ರವಿ ತಲೆಗೆ ಗಂಭೀರ ಗಾಯ ; ನನ್ನ ಕೊಲೆಗೆ ಸಂಚು ನಡೆದಿದೆ ಎಂದ ಎಂಎಲ್ಸಿ
ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಸಿ.ಟಿ ರವಿ ಅವರನ್ನು ತಡರಾತ್ರಿ ಪೊಲೀಸರು ಸುತ್ತಾಡಿಸಿದ್ದು, ಈ ಸಂದರ್ಭದಲ್ಲಿ ಸಿ.ಟಿ ರವಿ ತಲೆಗೆ ಗಂಭೀರ ಗಾಯವಾಗಿದೆ.
ಖಾನಾಪುರ ಪೊಲೀಸ್ ಠಾಣೆಗೆ ಗುರುವಾರ ರಾತ್ರಿ 8 ಗಂಟೆಗೆ ಕರೆತರತಾಗಿತ್ತು. ನಂತರ ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ ಪೊಲೀಸರು, ಸವದತ್ತಿ, ಲೋಕಾಪುರ ಸೇರಿದಂತೆ ವಿವಿಧ ಸ್ಥಳಕ್ಕೆ ತಡರಾತ್ರಿ ಮೂರು ಗಂಟೆಗಳ ವರೆಗೆ ಸುತ್ತಾಡಿಸಿದ್ದಾರೆ.
ಸಧ್ಯ ಪೊಲೀಸರ ನಡೆ ಅನುಮಾನ ಮೂಡಿಸಿದೆ. ಇನ್ನೂ ಸಿ.ಟಿ ರವಿ ತಲೆಗೆ ಗಂಭೀರ ಗಾಯವಾಗಿದ್ದು, ತಲೆಗೆ ಬ್ಯಾಂಡೆಜ್ ಮಾಡಲಾಗಿದೆ. ಈ ಕುರಿತು ವೀಡಿಯೋ ಹೆಳಿಕೆ ಬಿಡುಗಡೆ ಮಾಡಿರುವ ಸಿ.ಟಿ ರವಿ ನನ್ನ ಕೊಲೆಗೆ ಸಂಚು ನಡೆಸಿರುವ ಕಾಂಗ್ರೆಸ್ ಎಂದು ಆರೋಪಿಸಿದ್ದಾರೆ.
ಈಗಾಗಲೇ ಸಿ.ಟಿ ರವಿ ಭೇಟಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬೆಳಗಾವಿಗೆ ಆಗಮಿಸಿದ್ದು ಸಿ.ಟಿ ರವಿ ಬಂಧನಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.

