Select Page

Advertisement

ಮಹಿಳೆ ಮೇಲೆ‌ ಇದೆಂತ ಕ್ರೌರ್ಯ…? ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ ಕಿರಾತಕರು ; ವೀಡಿಯೋ ವೈರಲ್

ಮಹಿಳೆ ಮೇಲೆ‌ ಇದೆಂತ ಕ್ರೌರ್ಯ…? ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ ಕಿರಾತಕರು ; ವೀಡಿಯೋ ವೈರಲ್

ಬೆಳಗಾವಿ : ಕಳೆದ ಡಿಸೆಂಬರ್‌ ನಲ್ಲಿ ಮಗ ಯುವತಿಯೊಂದಿಗೆ ಓಡಿ ಹೋದ ಎಂಬ ಕಾರಣಕ್ಕೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದ ಘಟನೆ ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿತ್ತು.

ಈಗ ಬೆಳಗಾವಿ ನಗರದ ವಡ್ಡರವಾಡಿಯಲ್ಲಿ ವಿವಾಹಿತ ಮಹಿಳೆ ಹಾಗೂ ಆಕೆಯ ತಾಯಿಗೆ ಸೀರೆ ಬಿಚ್ಚಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗಂಡನ ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳದೆ ಇಲ್ಲಿನ ವಡ್ಡರವಾಡಿಯ ತಾಯಿ ಮನೆಯಲ್ಲಿ ವಾಸ ಇರುವ ವಿವಾಹಿತ ಮಹಿಳೆಯ ಮೇಲೆ ಪಕ್ಕದ ಮನೆಯ ಇದ್ರಾ ಅಷ್ಟೇಕರ್, ಹೂವಪ್ಪ ಅಷ್ಟೇಕರ್, ಮಣಿಕಠ ಅಷ್ಟೇಕರ್ ನಮ್ಮ ಮನೆಗೆ
ಬಂದು ನನ್ನ ತಾಯಿಯ ಸೀರೆ ಬಿಚ್ಚಿ, ನನಗೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ನಮಗೆ ನ್ಯಾಯ ಕೊಡಿಸಬೇಕೆಂದು ಮಾಳಮಾರುತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಮಹಾರಾಷ್ಟ್ರದ ಯುವಕನೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ನನಗೆ ಎರಡೂ ಮಕ್ಳಳಿದ್ದಾರೆ. ಗಂಡ‌ನ ಮನೆಯಲ್ಲಿ ಕಿರುಕುಳ ಇದ್ದ ಕಾರಣ ವಡ್ಡರವಾಡಿಯ ನನ್ನ ತಾಯಿಯ ಮನೆಯಲ್ಲಿ ವಾಸವಾಗಿರುವ ನಮ್ಮ ಮೇಲೆ ಪದೇ ಪದೇ ಅಷ್ಟೇಕರ್ ಕುಟುಂಬದವರು ಬಂದು ಅವಾಚ್ಯ ಶಬ್ದದಿಂದ ನಿಂಧಿಸುವುದು ಹಲ್ಲೆ ಮಾಡುವುದು ಮಾಡಿದ್ದಾರೆ.

ಕಳೆದ ಸೋಮವಾರ ಸಂಜೆ ನಮ್ಮ ಮನೆಗೆ ಬಂದ ಇಂದ್ರಾ ಏಕಾಏಕಿ ಹಲ್ಲೆ ಮಾಡಲು ಆರಂಭಿಸಿದಳು. ಹೂವಪ್ಪ ನನ್ನ ತಾಯಿಯ ಕೂದಲು ಹಿಡಿದು ಹೊರಗಡೆ ಎಳೆದುಕೊಂಡು‌ ಹೋಗಿ ಸೀರೆ ಬಿಚ್ವಿ ಹಲ್ಲೆ ಮಾಡಿದ್ದಾನೆ ಎಂದು ನೊಂದ ವಿವಾಹಿತ ಮಹಿಳೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!