Select Page

Advertisement

ಕೊನೆಗೂ ವಿವಾದಿತ ಅಧಿಕಾರಿ ಎತ್ತಂಗಡಿ ; ಸತ್ಯಕ್ಕೆ ಜಯ…!

ಕೊನೆಗೂ ವಿವಾದಿತ ಅಧಿಕಾರಿ ಎತ್ತಂಗಡಿ ; ಸತ್ಯಕ್ಕೆ ಜಯ…!

ಬೆಳಗಾವಿ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕೆಳಹಂತದ ನೌಕರರಿಗೆ ಮಾನಸಿಕ ಕಿರುಕುಳ ಹಾಗೂ ಸುಳ್ಳು ಆರೋಪ ಮಾಡಿ ಅಮಾನತ್ತಿಗೆ ಶಿಪಾರಸ್ಸು ಸೇರಿದಂತೆ ವಿವಿಧ ಆರೋಪ ಹೊತ್ತಿದ್ದ ವಿವಾದಿತ ಜಿಲ್ಲಾ ಅಧಿಕಾರಿ ಶಿವಪ್ರೀಯಾ ಕಡೇಚೂರ ಅವರನ್ನು ಎತ್ತಂಗಡಿ ಮಾಡಿ‌ ಸರ್ಕಾರ ಆದೇಶ ಹೊರಡಿಸಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಗಳಿಂದ ಕೆಳಹಂತದ ನೌಕರರಿಗೆ ಕಿರುಕುಳ‌‌ ಹಾಗೂ ಭ್ರಷ್ಟಾಚಾರ ಹಾಗೂ ಜಿಲ್ಲಾ ಪಂಚಾಯತಿ ಕಚೇರಿಯಿಂದ ಓರ್ವ ಅಧಿಕಾರಿ ಮಾಡುತ್ತಿರುವ ರಣತಂತ್ರದ ಕುರಿತು ನಿಮ್ಮ‌ ಬೆಳಗಾವಿ ವಾಯ್ಸ್ ನಿರಂತರ ವರದಿ ಪ್ರಕಟಿಸಿತ್ತು.

ಪ್ರಕರಣ ಕುರಿತು ನಿರಂತರ ಸುದ್ದಿ ಪ್ರಕಟಿಸಿದ ನಿಮ್ಮ ಬೆಳಗಾವಿ ವಾಯ್ಸ್

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ‌ ಕಳೆದ ಕೆಲ‌ ದಿನಗಳಿಂದ ನಡೆದ ಬೆಳವಣಿಗೆಯಿಂದ ಖುದ್ದು ಹಿರಿಯ ಅಧಿಕಾರಿಗಳೇ ಬೇಸರ ವ್ಯಕ್ತಪಡಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ಸಂಬಂಧಪಟ್ಟಿರದ ಕೆಲವರು ಹಸ್ತಕ್ಷೇಪ ಮಾಡಿದ್ದು ಬೆಳಕಿಗೆ ಬಂದಿದ್ದು ಜಿಲ್ಲಾ ಪಂಚಾಯತಿ ಸಿಇಒ ಈ ಕುರಿತು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.

ವಿವಾದಿತ ಅಧಿಕಾರಿ ಶಿವಪ್ರೀಯಾ ಕಡೇಚೂರ ಜೊತೆಗೆ ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಕೆ.ಬಿ ದೇವಪ್ಪಗೋಳ ಅವರನ್ನೂ ಎತ್ತಂಗಡಿ ಮಾಡಿ‌ ಆದೇಶ ಹೊರಡಿಸಲಾಗಿದೆ.


Advertisement

Leave a reply

Your email address will not be published. Required fields are marked *

error: Content is protected !!