ಬೆಳಗಾವಿ : ಬಾಕ್ಸೈಟ್ ರಸ್ತೆಯಲ್ಲಿ ಮೃತ್ಯುಕೂಪ ; ಜನರ ಪ್ರಾಣ ಹೋಗುವ ಮುನ್ನ ಅಧಿಕಾರಿಗಳೆ ಎಚ್ಚರಾಗಿ
ಬೆಳಗಾವಿ ನಗರದ ಪ್ರಮುಖ ರಸ್ತೆಯಲ್ಲಿ ಒಂದಾದ ಬಾಕ್ಸೈಟ್ ರಸ್ತೆ ಸಧ್ಯ ಜನರ ಜೀವ ನುಂಗಲು ಕಾಯುತ್ತಿದ್ದು, ಗುತ್ತಿಗೆದಾರರ ಬೇಜವಾಬ್ದಾರಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಹನುಮಾನ್ ಸರ್ಕಲ್ ಗೆ ತೆರಳುವ ಬಾಕ್ಸೈಟ್ ರಸ್ತೆ ಕಾಮಗಾರಿ ಚಾಲ್ತಿಯಿದ್ದರು ಯಾವುದೇ ಎಚ್ಚರಿಕೆ ಫಲಕ ಹಾಕದೇ ಗುತ್ತಿಗೆದಾರರು ಬೇಜವಾಬ್ದಾರಿ ತೋರಿದ್ದಾರೆ. ಇದರಿಂದ ವೇಗವಾಗಿ ಬಂದ ಜನರಿಗೆ ಎಲ್ಲಿ ರಸ್ತೆ ಅರ್ಧಕ್ಕೆ ನಿಂತಿದೆ ಎಂಬುವುದೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಂಡಿಯಿಂದ ಬೇಸತ್ತಿರುವ ಜನರಿಗೆ ಸಧ್ಯ ಬಾಕ್ಸೈಟ್ ರಸ್ತೆ ಮೃತ್ಯುಕೂಪ ಆಗಿದ್ದಲ್ಲದೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿ ವರ್ತನೆಯಿಂದ ಜೀವ ಕೈಯಲ್ಲಿ ಹಿಡಿದು ಸಾಗುವ ಅನಿವಾರ್ಯತೆ ಎದುರಾಗಿದೆ.
ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಅರ್ಧ ಕಾಮಗಾರಿ ನಡೆದ ಜಾಗದಲ್ಲಿ ಸೂಚನಾ ಫಲಕ ಹಾಕಿ ಜನರ ಪ್ರಾಣ ಉಳಿಸಿದರೆ ಒಳಿತು.