Select Page

Advertisement

ಬೆಳಗಾವಿ ಜನರ ನೆಮ್ಮದಿಯ ನಿದ್ದೆಗೆ ಭಂಗ ತಂದ‌ ಇರಾನಿ ಗ್ಯಾಂಗ್…?

ಬೆಳಗಾವಿ ಜನರ ನೆಮ್ಮದಿಯ ನಿದ್ದೆಗೆ ಭಂಗ ತಂದ‌ ಇರಾನಿ ಗ್ಯಾಂಗ್…?

ಬೆಳಗಾವಿ : ನಗರದಲ್ಲಿ ಮತ್ತೆ ಇರಾನಿ ಗ್ಯಾಂಗ್ ಆ್ಯಕ್ಟಿವ್ ಆಯ್ತಾ ಎಂಬ ಪ್ರಶ್ನೆ ಮೂಡಿದೆ. ಒಂಟಿ ಮಹಿಳೆಯರ ಆಭರಣಗಳನ್ನು ಕಿತ್ತುಕೊಂಡು ಪರಾರಿ ಆಗುವುದು ಮತ್ತು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಮಹಾಂತೇಶ ನಗರ,ಅಮನ್ ನಗರದಲ್ಲಿ ಸೇರಿದಂತೆ ವಿವಿದೆಡೆ ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಖದೀಮರ ಸಂಪೂರ್ಣ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅಷ್ಟೇ ಅಲ್ಲದೆ ಶ್ರಾವಣ ಸೋಮವಾರದ ಹಿನ್ನಲೆಯಲ್ಲಿ ಮಹಿಳೆಯರು ಚಿನ್ನಾಭರಣ ದರಿಸಿ ದೇವಸ್ಥಾನಕ್ಕೆ ತೆರಳುತ್ತಾರೆ ಎಂಬ ಸಂದರ್ಭ ನೋಡಿಕೊಂಡು ದಾಳಿ ನಡೆಯುತ್ತಿವೆ.

ಸಧ್ಯ 2.5 ಲಕ್ಷಷ ಚಿನ್ನಾಭರಣ,50 ಸಾವಿರ ಮೌಲ್ಯದ ಬೆಳ್ಳಿ 2.20 ಲಕ್ಷ ‌ನಗದು ಸೇರಿ 7 ಲಕ್ಷ ಮೌಲ್ಯದ ವಸ್ತುಗಳನ್ನು ಖದೀಮರು ಎಗರಿಸಿದ್ದಾರೆ. ಜೊತೆಗೆ ಇವರ ಚಲನವಲನಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.

ಈ ಕುರಿತು ಬೆಳಗಾವಿ ನಗರ ಪೊಲೀಸ್ ಆಯಯಕ್ತ ಎಡಾ ಮಾರ್ಟಿನ್ ಮಾತನಾಡಿ. ನಗರದ ಕೆಲವು ಕಡೆಗಳಲ್ಲಿ ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು ಪೊಲೀಸರ ಬಲೆ ಬೀಸಿದ್ದಾರೆ. ನಾಗರಿಕರು ಅಪರಾಧ ಕೃತ್ಯ ನಡೆಸ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

Advertisement

Leave a reply

Your email address will not be published. Required fields are marked *

error: Content is protected !!