Select Page

ಎಣ್ಣೆ ಅಂಗಡಿ ಸ್ಥಳಾಂತರ ಮಾಡಬ್ಯಾಡ್ರಿ ; ಕಿತ್ತೂರು ಹುಲಿಗಳ ವಿನೂತನ ಪ್ರತಿಭಟನೆ

ಎಣ್ಣೆ ಅಂಗಡಿ ಸ್ಥಳಾಂತರ ಮಾಡಬ್ಯಾಡ್ರಿ ; ಕಿತ್ತೂರು ಹುಲಿಗಳ ವಿನೂತನ ಪ್ರತಿಭಟನೆ

ಚನ್ನಮ್ಮನ ಕಿತ್ತೂರು : ಪಟ್ಟಣದ ಸೋಮವಾರ ಪೇಟೆಯಲ್ಲಿರುವ ಎಂ ಎಸ್ ಆಯ್ ಎಲ್ ಮದ್ಯದ ಮಳಿಗೆಯನ್ನು ಸ್ಥಳಾಂತರ ಮಾಡುವುದು ಬೇಡ ಎಂದು ಮಂಜುನಾಥ ಅಮರಪ್ಪನವರ ಹೇಳಿದರು.

ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಇವರು. ಎಂ ಎಸ್ ಆಯ್ ಎಲ್ ಮದ್ಯದ ಮಳಿಗೆ ಮುಂದೆ ಅಷ್ಟೇ ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ಓಡಾಡುವುದಿಲ್ಲ. ಪಟ್ಟಣದ ಕೋಟೆಯ ಮುಂದೆ ಇರುವ ಮದ್ಯದ ಅಂಗಡಿ ಸೇರಿದಂತೆ ಎಲ್ಲ ಮದ್ಯದ ಅಂಗಡಿಗಳ ಮುಂದೆ ಸಾರ್ವಜನಿಕರು ಓಡಾಡುತ್ತಾರೆ.

ಆದರೆ ಇದೇ ಅಂಗಡಿ ಮಾತ್ರ ಯಾಕೆ ಸ್ಥಳಾಂತರ ಮಾಡಬೇಕು. ಇದರಿಂದ ಯಾವುದೇ ಸಾರ್ವಜನಿಕರಿಗೆ ತೊಂದರೆ ಇಲ್ಲ. ಮದ್ಯದ ಮಳಿಗೆ ಸ್ಥಳಾಂತರ ಮಾಡುವುದಾದರೆ ಎಲ್ಲ ಮದ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡಬೇಕು ಎಂದರು.

ಸಿದ್ದಪ್ಪ ಕರಡಿಗುದ್ದಿ, ಮಂಜುನಾಥ ಅಮರಾಪೂರ, ಭಿಮಪ್ಪ ಚವ್ಹಾನ, ರಮೇಶ ಇಂಚಲ, ಮಂಜುನಾಥ ಚವ್ಹಾನ, ಶಿವನಪ್ಪ ಹಣಜಿ, ಮಹೇಶ ಕದಂ, ಮಾರುತಿ ಕಲ್ಲವಡ್ಡರ, ಶಿವಾನಂದ ಜಡಿ ಸೇರಿದಂತೆ ಇತರರು ಇದ್ದರು.

Advertisement

Leave a reply

Your email address will not be published. Required fields are marked *

error: Content is protected !!